ಮಡಿಕೇರಿ, ಜೂ. 20: ಜೂನ್ 10 ರಂದು ಆನ್‍ಲೈನ್‍ನಲ್ಲಿ ಪ್ರಕಟಿಸಿದ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅಪ್‍ಲೋಡ್ ಮಾಡಲಾಗಿರುವ ಮಾಹಿತಿಯು ತಾಂತ್ರಿಕ ದೋಷದಿಂದಾಗಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅಪ್‍ಲೋಡ್ ಆಗಿರುತ್ತದೆ. ಆನ್‍ಲೈನ್‍ನಲ್ಲಿ ಅಪ್‍ಲೋಡ್ ಆಗಿರುವ ಮಾಹಿತಿಯು ಕಾರ್ಯಕರ್ತೆಯ ಹುದ್ದೆಗೆ ಬದಲಾಗಿ ಸಹಾಯಕಿಯರ ಹುದ್ದೆಯಾಗಿರುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಬದಲಾವಣೆಯನ್ನು ಗಮನಿಸಬೇಕಾಗಿ ವಿನಂತಿಸಿದೆ. ಸೋಮವಾರಪೇಟೆ ಯೋಜನೆ ಬೆಸೂರು ಪಂಚಾಯಿತಿಯ ನಿಲುವಾಗಿಲು, ಬೇಳೂರು ಪಂಚಾಯಿತಿಯ ಕೆಂಚಮ್ಮನಬಾಣೆ, ಹಂಡ್ಲಿ ಪಂಚಾಯಿತಿಯ ಗುಡುಗಳಲೆ ಅಂಗನವಾಡಿ ಕೇಂದ್ರ ಹಾಗೂ ಪೊನ್ನಂಪೇಟೆ ಯೋಜನೆಯ ದೇವರಪುರ ಪಂಚಾಯಿತಿಯ ನೆಲ್ಲಿಕಾಡು ಮತ್ತು ಸಿದ್ದಾಪುರ ಪಂಚಾಯಿತಿಯ ಸುಂದರನಗರ ಈ 5 ಅಂಗನವಾಡಿ ಕೇಂದ್ರಗಳು ಸಹಾಯಕಿ ಹುದ್ದೆಗೆ ಅಪ್‍ಲೋಡ್ ಮಾಡಿದ ಕೇಂದ್ರಗಳಾಗಿರುತ್ತದೆ ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.