ಗೋಣಿಕೊಪ್ಪ ವರದಿ, ಜೂ. 19: ಕೊಡಗು ಸಿರಿಗನ್ನಡ ವೇದಿಕೆ ಹಾಗೂ ಪೊನ್ನಂಪೇಟೆ ಸಿರಿಗನ್ನಡ ಮಹಿಳಾ ಘಟಕ ವತಿಯಿಂದ ಆನ್‍ಲೈನ್ ಮೂಲಕ ಮಳೆಕವನ ಸ್ಪರ್ಧೆ ಆಯೋಜಿಸಲಾಗಿದೆ.
ಮಳೆಗೆ ಸಂಬಂಧಿಸಿದಂತೆ ಕವನ ಬರೆಯಬಹುದಾಗಿದೆ. ಗುಡುಗು ಮಿಂಚಿನ ಆರ್ಭಟ, ಮಳೆಯಲ್ಲಿ ನೆನೆಯುವುದರ ಅನುಭವ, ಗಾಳಿಗೆ ಮಗುಚುವ ಕೊಡೆಗಳು, ವಿಶೇಷ ಖಾದ್ಯಗಳು, ನೀರಿನಲ್ಲಿ ಹರಿಯಬಿಡುವ ಕಾಗದದ ದೋಣಿ, ಜತೆಯಲ್ಲಿ ಮಳೆಗಾಲದ ದುರಂತಗಳ ಸರಮಾಲೆ ಹೀಗೆ ಹತ್ತು ಹಲವು ನೆನಪುಗಳು, ಘಟನೆಗಳು ಕವನ ರೂಪದಲ್ಲಿ ನೀಡಬಹುದಾಗಿದೆ. ಕವನ ಇಪ್ಪತ್ತು ಸಾಲು ಮೀರದಂತಿರಬೇಕು.
ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಪ್ರಶಸ್ತಿ ಪತ್ರದ ರೂಪದಲ್ಲಿ ಹಾಗೂ ಸ್ಪರ್ಧಿಗಳಿಗೆ ಮೆಚ್ಚುಗೆ ಪತ್ರವನ್ನು ನೀಡಲಾಗುವುದು. ತಾ. 30 ರೊಳಗೆ ತಲುಪುವಂತೆ 9449123119 ಸಂಖೆಗೆ ವಾಟ್ಸ್‍ಆ್ಯಪ್ ಮಾಡಬೇಕಿದೆ ಎಂದು ಪೊನ್ನಂಪೇಟೆ ಮಹಿಳಾ ಘಟಕ ಅಧ್ಯಕ್ಷೆ ಉಳುವಂಗಡ ಕಾವೇರಿ ಉದಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.