ಮಡಿಕೇರಿ, ಜೂ. 18: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ತೀವ್ರಗೊಳ್ಳುವ ಮುನ್ಸೂಚನೆಯೊಂದಿಗೆ ಕಳೆದ 24 ಗಂಟೆಗಳಲ್ಲಿ ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿ ಹಾಗೂ ಭಾಗಮಂಡಲ ಮಡಿಕೇರಿ, ಜೂ. 18: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ತೀವ್ರಗೊಳ್ಳುವ ಮುನ್ಸೂಚನೆಯೊಂದಿಗೆ ಕಳೆದ 24 ಗಂಟೆಗಳಲ್ಲಿ ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿ ಹಾಗೂ ಭಾಗಮಂಡಲ ಮಳೆಯಾಗಿದೆ.ಜಿಲ್ಲೆಯಾದ್ಯಂತ ಸರಾಸರಿ 1.62 ಇಂಚು ಮಳೆಯೊಂದಿಗೆ ಮಡಿಕೇರಿ ತಾಲೂಕಿನಲ್ಲಿ 2.63 ಇಂಚು, ವೀರಾಜಪೇಟೆ ತಾಲೂಕಿನಲ್ಲಿ 1.48 ಇಂಚು, ಸೋಮವಾರಪೇಟೆ ತಾಲೂಕಿನಲ್ಲಿ 0.93 ಇಂಚು ಮಳೆ ದಾಖಲಾಗಿದೆ.ವರ್ಷಾರಂಭದಿಂದ ಇದುವರೆಗೆ ಜಿಲ್ಲೆಯಲ್ಲಿ 8.93 ಇಂಚು, ಕಳೆದ ಅವಧಿಯಲ್ಲಿ 5.63 ಇಂಚು ದಾಖಲಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಪ್ರಸ್ತುತ ಅವಧಿಗೆ ಒಟ್ಟು 13.75 ಇಂಚು ಹಾಗೂ ಹಿಂದಿನ ವರ್ಷ ಈ ವೇಳೆಗೆ 7.45 ಇಂಚು ಮಳೆಯಾಗಿತ್ತು. ವೀರಾಜಪೇಟೆ ತಾಲೂಕಿನಲ್ಲಿ 8.05 ಇಂಚು, ಕಳೆದ ಸಾಲಿಗೆ 6.79 ಇಂಚು ದಾಖಲಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ 4.49 ಇಂಚು ಹಾಗೂ 2019ರ ಈ ವೇಳೆಗೆ 2.66 ಇಂಚು ಮಳೆಯಾಗಿತ್ತು.
ಕಳೆದ 24 ಗಂಟೆಗಳಲ್ಲಿ ಮಡಿಕೇರಿ 1.89 ಇಂಚು,
(ಮೊದಲ ಪುಟದಿಂದ) ನಾಪೋಕ್ಲು 2.11 ಇಂಚು, ಸಂಪಾಜೆ 1.43 ಇಂಚು, ಅಮ್ಮತ್ತಿ 1.72 ಇಂಚು, ಬಾಳೆಲೆ 1 ಇಂಚು, ಸೋಮವಾರಪೇಟೆ 0.78 ಇಂಚು, ಶನಿವಾರಸಂತೆ 0.55, ಕೊಡ್ಲಿಪೇಟೆ 0.77 ಹಾಗೂ ಶಾಂತಳ್ಳಿ 1.65 ಇಂಚು ಮಳೆಯಾಗಿದೆ. ಸುಂಟಿಕೊಪ್ಪ 1.45 ಇಂಚು, ಕುಶಾಲನಗರ 0.40 ಇಂಚು ದಾಖಲಾಗಿದೆ.
ಹಾರಂಗಿ: ಹರಾಂಗಿ ಜಲಾಶಯ ನೀರಿನ ಮಟ್ಟ 2834.18 ಅಡಿ ತಲುಪಿದ್ದು, ಕಳೆದ ವರ್ಷ 2805.76 ಅಡಿ ಇತ್ತು. ಪ್ರಸ್ತುತ 28.48 ಅಡಿ ಅಧಿಕ ನೀರು ಗೋಚರಿಸಿದೆ. ಗರಿಷ್ಠ ಮಟ್ಟಕ್ಕಿಂತ 24.87 ಅಡಿ ವ್ಯತ್ಯಾಸ ಕಂಡುಬರುವಂತಾಗಿದೆ. ಜಲಾಶಯಕ್ಕೆ 554 ಕ್ಯೂಸೆಕ್ಸ್ ಒಳ ಹರಿವು ಇದ್ದು, ಕಳೆದ ವರ್ಷ 145 ಕ್ಯೂಸೆಕ್ಸ್ ಗೋಚರಿಸಿತ್ತು.
ವರ್ಷದ ಮಳೆ: ಕೊಡಗು ಜಿಲ್ಲೆಗೆ ಈ ಅವಧಿಯಲ್ಲಿ 2017ರಲ್ಲಿ 8.89 ಇಂಚು, 2018ರಲ್ಲಿ 31.53 ಇಂಚು, 2019ರಲ್ಲಿ 7.32 ಇಂಚು ಮಳೆಯಾದರೆ, ಪ್ರಸ್ತುತ 8.32 ಇಂಚು ದಾಖಲಾಗಿದೆ.
ಕುಶಾಲನಗರ
ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆ ಬೀಳುತ್ತಿರುವ ಕಾರಣ ಕುಶಾಲನಗರ- ಕೊಪ್ಪ ಬಳಿಯ ಕಾವೇರಿ ಸೇತುವೆ ಬಳಿ ನೀರಿನ ಹರಿವಿನ ದೃಶ್ಯ
ಸಿದ್ದಾಪುರ :ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಹಾಗೂ ಸಿದ್ದಾಪುರ ಭಾಗದಲ್ಲಿ ಧಾರಾಕಾರ ಮಳೆಯಿಂದಾಗಿ ಸಿದ್ದಾಪುರದ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಕಳೆದ ವರ್ಷ ಸುರಿದ ಮಹಾ ಮಳೆಯಿಂದಾಗಿ ಕಾವೇರಿ ನದಿ ಪ್ರವಾಹ ಏರಿಕೆಯಾಗಿ ಸಿದ್ದಾಪುರ ಸುತ್ತಮುತ್ತಲಿನ ಪ್ರದೇಶದ ನದಿ ತೀರದ ನೂರಾರು ಮನೆಗಳು ಹಾನಿಗೊಳಗಾಗಿದ್ದವು. ಈ ಹಿನ್ನೆಲೆಯಲ್ಲಿ ಈಗಾಗಲೇ ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ಗ್ರಾಮದ ನದಿ ತೀರದಲ್ಲಿ ವಾಸ ಮಾಡುವ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕಂದಾಯ ಇಲಾಖೆ ವತಿಯಿಂದ ಸೂಚನೆ ನೀಡಲಾಗಿದೆ.
ಬಲಮುರಿ
ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಾವೇರಿ ನದಿ ನೀರಿನ ಹರಿವಿನಲ್ಲಿ ಏರಿಕೆ ಕಂಡುಬಂದಿದ್ದು, ಮೂರ್ನಾಡು ಸನಿಹದ ಬಲಮುರಿಯಲ್ಲಿ ಹಳೆ ಸೇತುವೆ ಮೇಲೆ ನೀರು ಹರಿಯುತ್ತಿದೆ.
ಮುಕ್ಕೋಡ್ಲು
ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಮುಕ್ಕೋಡ್ಲುವಿನಿಂದ ನಾಗಬಾಣೆಗೆ ತೆರಳುವ ರಸ್ತೆಗೆ ಅಡ್ಡಲಾಗಿ ಮರ ಉರುಳಿಬಿದ್ದಿದೆ.