ಗುಡ್ಡೆಹೊಸೂರು, ಜೂ. 18: ಇಲ್ಲಿಗೆ ಸಮೀಪದ ಮಾದಪಟ್ಟಣ ಸರಕಾರಿ ಶಾಲಾ ಆವರಣದಲ್ಲಿ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.
ಪ್ರಕೃತಿ ವಿಕೋಪದ ಅನುದಾನದಡಿಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರ ಸಹಕಾರದಲ್ಲಿ ಸುಮಾರು ರೂ. 12 ಲಕ್ಷ ಹಣದಲ್ಲಿ ಕೊಠಡಿ ನಿರ್ಮಾಣವಾಗಲಿದ್ದು, ಭೂಮಿಪೂಜೆ ನಡೆಯಿತು.
ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪ್ರವೀಣ್, ಶಿವಪ್ಪ, ಪುಷ್ಪ ಮತ್ತು ಇಂಜಿನಿಯರ್ ಸೈಜಾನ್ ಪೀಟರ್, ಶಾಲೆಯ ಮುಖ್ಯ ಶಿಕ್ಷಕಿ ದೇವಮ್ಮ, ಸಿ.ಆರ್.ಪಿ. ಸತ್ಯನಾರಾಯಣ ಮತ್ತು ಶಾಲೆಯ ಎಲ್ಲಾ ಸಹ ಶಿಕ್ಷಕರು ಹಾಜರಿದ್ದರು.