ಕೂಡಿಗೆ, ಜೂ. 17: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡುಮಂಗಳೂರು ಗ್ರಾಮದ ಒಳಗಡೆಯಿಂದ ಚಿಕ್ಕತ್ತೂರು ಗ್ರಾಮದ ಸರ್ಕಲ್‍ನವರೆಗೆ ರಸ್ತೆ ಕಾಮಗಾರಿಯ ಭೂಮಿಪೂಜೆ ನಡೆದು 5 ತಿಂಗಳುಗಳು ಕಳೆದಿದೆ. ಸ್ಥಗಿತಗೊಂಡ ರಸ್ತೆಯ ಕಾಮಗಾರಿಯನ್ನು ಪುನರ್ ಪ್ರಾರಂಭಿಸಲು ಈ ವ್ಯಾಪ್ತಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.