ಸೋಮವಾರಪೇಟೆ, ಜೂ. 18: ಭಾರತದೊಂದಿಗೆ ಸಂಘರ್ಷ ಕ್ಕಿಳಿದಿರುವ ಚೀನಾ ಉತ್ಪಾದಿತ ವಸ್ತುಗಳನ್ನು ತಿರಸ್ಕರಿಸಿ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕ ಉಲ್ಲಾಸ್ ತಿಮ್ಮಯ್ಯ ಕರೆ ನೀಡಿದರು.
ಹಿಂದೂ ಜಾಗರಣ ವೇದಿಕೆ ವತಿಯಿಂದ ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಆಯೋಜಿಸಲಾಗಿದ್ದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಶಾಂತಿಯ ಮುಖವಾಡ ಧರಿಸಿ ಚೀನಾ ಭಾರತದೊಂದಿಗೆ ಸಂಘರ್ಷಕ್ಕಿಳಿದಿದೆ ನೇರವಾಗಿ ಯುದ್ಧ ಮಾಡದೆ ದೊಣ್ಣೆ, ಮುಳ್ಳುಗಳಿಂದ ಭಾರತೀಯ ಸೈನಿಕರ ಮೇಲೆ ಹಲ್ಲೆ ಮಾಡಿ ಪೈಶಾಚಿಕ ಕೃತ್ಯ ಮೆರೆದಿದ್ದಾರೆ. ಚೀನಾ ಉತ್ಪಾದಿತ ಯಾವುದೇ ವಸ್ತುಗಳನ್ನು ಅವರ ಆ್ಯಪ್ಗಳನ್ನು ಬಳಸದೆ ಅವರು ಆರ್ಥಿಕವಾಗಿ ಕುಗ್ಗುವಂತೆ ಮಾಡಬೇಕು ಎಂದು ಹೇಳಿದರು.
ಹುತಾತ್ಮ ಯೋಧರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಪೂರ್ಣಿಮ ಗೋಪಾಲ್, ಬಿ.ಜೆ ದೀಪಕ್, ಹಿಂ.ಜಾ.ವೇದಿಕೆಯ ಪದಾಧಿಕಾರಿಗಳಾದ ಸುಭಾಷ್ ತಿಮ್ಮಯ್ಯ, ಉಮೇಶ್, ದರ್ಶನ್ ಇದ್ದರು.