ಭಾಗಮಂಡಲ, ಜೂ. 18: ತಾ. 21ರಂದು ಸಂಭವಿಸಲಿರುವ ಖಂಡಗ್ರಾಸ ಸೂರ್ಯ ಗ್ರಹಣದ ಪ್ರಯುಕ್ತ ಮಡಿಕೇರಿಯ ಓಂಕಾರೇಶ್ವರ ದೇವಾಲಯ, ಭಾಗಮಂಡಲದ ಭಗಂಡೇಶ್ವರ ದೇವಾಲಯ ಹಾಗೂ ತಲಕಾವೇರಿ ಕ್ಷೇತ್ರಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ದೇವರ ದರ್ಶನಕ್ಕೆ ಅವಕಾಶ ನಿಷೇದಿಸಲಾಗಿದೆ. ಲಾಕ್‍ಡೌನ್ ಪ್ರಯುಕ್ತ ಬಂದ್ ಮಾಡಲಾಗಿದ್ದ ದೇವಾಲಯಗಳನ್ನು ತೆರೆಯಲು ಈಚೆಗೆ ಸರ್ಕಾರ ಅವಕಾಶ ಕಲ್ಪಿಸಿದ್ದು ಇದೀಗ ಗ್ರಹಣ ಪ್ರಯುಕ್ತ ಒಂದು ದಿನ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿ ರುವುದಿಲ್ಲ. ಭಕ್ತರು ಸಹಕರಿಸುವಂತೆ ದೇವಾಲಯದ ಪ್ರಕಟಣೆ ತಿಳಿಸಿದೆ.