ಕೂಡಿಗೆ, ಜೂ. 17: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಗೋ ಸದನಕ್ಕೆ ಸೇರಿದ ಜಾಗದ ಸರ್ವೆ ಕಾರ್ಯ ಪ್ರಾರಂಭಿಸುವಂತೆ ಅಲ್ಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹುದುಗೂರುವಿನಲ್ಲಿ ಕಳೆದ ಅನೇಕ ವರ್ಗಗಳಿಂದಲೂ ಈ ಭಾಗದ ರೈತರು ತಮ್ಮ ಹಸುಗಳನ್ನು ಈಗಿರುವ ಗೋ ಸದನದÀ ಕೊಠಡಿಯಲ್ಲಿ ಕಟ್ಟುತ್ತಿದ್ದರು ಮತ್ತು ಈ ಕಟ್ಟಡವು ಹಳೆಯದಾದರು ಉತ್ತಮ ಸ್ಥಿತಿಯಲ್ಲಿದೆ ಹಸು ಮತ್ತು ಕರುಗಳ ಸಾಗಾಣಿಕೆಗೆ ಬೇಕಾಗುವ ಎಲ್ಲಾ ವ್ಯವಸ್ಥೆ ಈ ಕೇಂದ್ರದಲ್ಲಿದೆ. ಈ ವಿಷಯದ ಬಗ್ಗೆ ಹುದುಗೂರು, ಮದಲಾಪುರ, ಸೀಗೆಹೂಸೂರು, ಸೀತೆಗದ್ದೆ, ಮಾವಿನಹಳ್ಳ ಗ್ರಾಮಗಳ ರೈತರು ಸಭೆ ಸೇರಿ ಗೋ ಶಾಲೆಯನ್ನು ತೆÀರೆಯುವ ಬಗ್ಗೆ ಚರ್ಚೆಗಳು ನಡೆದು ಕ್ಷೇತ್ರದ ಶಾಸಕರಿಗೆ ಮನವಿ ಪತ್ರವನ್ನು ನೀಡಿದರು. ಪಶುಪಾಲನಾ ಇಲಾಖೆಯ ಮೂಲಕ ಗೋ ಸದನ ಶಾಲೆಯನ್ನು ತೆರೆಯಲು ಬೇಕಾದ ಕ್ರಮಗಳನ್ನು ಕೈಗೊಳ್ಳಲು ಶಾಸಕರು ಇಲಾಖೆಯವರಿಗೆ ಸೂಚನೆ ನೀಡಿದರು. ಸಂಬಂಧಿಸಿದ ಇಲಾಖೆಯವರು ಸರ್ವೆ ಕಾರ್ಯವನ್ನು ಪೂರ್ಣಗೊಳಿಸಿ ಕೊಡಬೇಕೆಂದು ಹುದುಗೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.