ಮಡಿಕೇರಿ, ಜೂ. 17: ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದಾಗ ಕೊಡಗು ಜಿಲ್ಲÉಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಅತಿ ವಿರಳ. ಕೊರೊನಾ ಪ್ರಾರಂಭದ ಸಮಯದಲ್ಲಿ ದುಬೈನಿಂದ ಕೊಡಗಿಗೆ ಬಂದ ವ್ಯಕ್ತಿಗೆ ಪಾಸಿಟಿವ್ ಇದ್ದುದು ನೆಗೆÀಟಿವ್ ಆದ ಬಳಿಕ ಜಿಲ್ಲೆ ಸಂಪೂರ್ಣ ಸುರಕ್ಷಿತವಾಗಿತ್ತು. ಆದರೆ, ಕಳೆದ ತಿಂಗಳು ಲಾಕ್‍ಡೌನ್ ನಿರ್ಬಂಧ ಸಡಿಲಿಕೆ ಬಳಿಕ ಮುಂಬೈನಿಂದ ಕೊಡಗಿಗೆ ಬಂದಿದ್ದ ಇಬ್ಬರಿಗೆ ಕೊರೊನಾ ಸೋಂಕು ಪಾಸಿಟಿವ್ ಎಂದು ದೃಢಪಟ್ಟಿತ್ತು.ಮೇ 18 ರಂದು ಜಿಲ್ಲೆಗೆ ಮುಂಬೈನಿಂದ ಬಂದಿದ್ದ ಮಹಿಳೆಗೆ ಪಾಸಿಟಿವ್ ಖಾತರಿಯಾಗಿ ಇದೀಗ 29 ದಿನಗಳು ಕಳÉದಿವೆ. ಅದೇ ರೀತಿ ಮೇ 24 ರಂದು ಜಿಲ್ಲೆಗೆ ಮುಂಬೈನಿಂದ ಬಂದ ಯುವಕನಿಗೆ ಪಾಸಿಟವ್ ದೃಢಪಟ್ಟು 23 ದಿನಗಳು ಕಳೆದಿವೆ. ಮೂಲದ ಪ್ರಕಾರ ಇಬ್ಬರ ಆರೋಗ್ಯವೂ ಸ್ಥಿರವಾಗಿದೆ. ಆದರೆ, ಪಾಸಿಟಿವ್ ಪ್ರಕರಣ ಗಳನ್ನು ಹಲವು ಬಾರಿ ಪರೀಕ್ಷೇಗೆ ಒಳಪಡಿಸಿ ನೂರಕ್ಕೆ ನೂರು ನೆÀಗೆಟಿವ್ ಎಂದು ಪೂರ್ಣ ಖಚಿತವಾಗುವವರೆಗೂ ಈ ಇಬ್ಬರನ್ನೂ ಕೋವಿಡ್ ಆಸ್ಪತೆಯಲ್ಲಿರಿಸಲು ಜಿಲ್ಲಾಡಳಿತ ನಿರ್ಧಾರ ಕೈಗೊಂಡಿದೆ. ಬೆಂಗಳೂರಿನಲ್ಲಿಯೂ ಇಂತಹ ಹಲವು ಪ್ರಕರಣಗಳನ್ನು ಅಲ್ಲಿನ ಕೆಲವು ಪ್ರಮುಖ ಕೋವಿಡ್ ಕೇಂದ್ರಗಳಲ್ಲಿ 51 ದಿನಗಳವರೆಗೂ ಇರಿಸಿಕೊಂಡು ಪೂರ್ಣವಾಗಿ ನೆಗೆಟಿವ್ ಎಂದು ದೃಢಪಟ್ಟ ಬಳಿಕವಷ್ಟೇ ಅಂತಹವರನ್ನು ಆಸ್ಪತ್ರೆÉಯಿಂದ ಮುಕ್ತಗೊಳಿಸಿ ಮನೆಗೆ ಕಳುಹಿಸಲಾಗಿದೆ. (ಮೊದಲ ಪುಟದಿಂದ) ಈ ರೀತಿಯ ಕ್ರಮವನ್ನು ಕೊಡಗಿನಲ್ಲಿಯೂ ಮಾದರಿಯಾಗಿ ಪರಿಗಣಿಸಲಾಗಿದೆ. ಈ ಬಗ್ಗೆ ಉನ್ನತ ತಜ್ಞರ ಸಲಹೆಯನ್ನೂ ಪಡೆಯಲಾಗುತ್ತಿದೆ. ಆರೋಗ್ಯ ಸ್ಥಿರವಾಗಿದ್ದರೂ ಕೆಲವೊಮ್ಮೆ ಸಣ್ಣ ವ್ಯತ್ಯಾಸವಿದ್ದರೂ ಅಂತಹವರನ್ನು ದೀರ್ಘಾವಧಿ ಚಿಕಿತ್ಸೆಗೆ ಒಳಪಡಿಸಿ ಸಂಪೂರ್ಣ ನೆಗೆಟಿವ್ ಎನ್ನುವದು ಖಚಿತಗೊಂಡ ಬಳಿಕವಷ್ಟೇ ಕಳುಹಿಸಿಕೊಡಲಾಗುತ್ತದೆ. ಈ ಬಗ್ಗೆ ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿ ವಹಿಸಿರುವದಾಗಿ ತಿಳಿದುಬಂದಿದೆ. ಜಿಲ್ಲೆಯಲ್ಲಿ ಈ ಎರಡು ಪ್ರಕರಣಗಳನ್ನು ಬಿಟ್ಟರೆ ಇತರ ನಾಲ್ಕು ಸಾವಿರಕ್ಕೂ ಅಧಿಕ ಪ್ರಕರಣಗಳಲ್ಲಿ ನೆಗೆಟಿವ್ ಎಂದು ವರದಿ ಬಂದಿರುವದು ಸಮಾಧಾನಕರ ವಿಷಯವಾಗಿದೆ. ಯಾವದಕ್ಕೂ ಕೊಡಗು ಮತ್ತೆ ಪೂರ್ಣ ಕೊರೊನಾ ಮುಕ್ತ ಜಿಲ್ಲೆ ಎಂದು ಘೋಷಿಸಲ್ಪಡಬೇಕಾದರೆ, ಇನ್ನಷ್ಟು ದೀರ್ಘಾವಧಿವರೆÀಗೆ ಕಾಯುವದು ಅನಿವಾರ್ಯವಾಗಿದೆ.