ಮಡಿಕೇರಿ, ಜೂ. 17: ಇಂದು ಮಧ್ಯಾಹ್ನದ ಬಳಿಕ ಮಳೆಯ ರಭಸ ತೀವ್ರಗೊಂಡಿದ್ದು, ಮಳೆಯ ತೀವ್ರತೆಗೆ ಮಡಿಕೇರಿಯ ಚಾಮುಂಡೇಶ್ವರಿ ನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದೆ.ಸಂಜೆ 5 ಗಂಟೆ ವೇಳೆಗೆ ಸಣ್ಣ ಪ್ರಮಾಣದಲ್ಲಿ ಮಣ್ಣು ಜರಿದಿದ್ದು, ರಾತ್ರಿ ಮತ್ತೊಮ್ಮೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಚಾಮುಂಡೇಶ್ವರಿ ನಗರದ ನಿವಾಸಿ ಗಳನ್ನು ಸ್ಥಳಾಂತರ ಮಾಡಲು ಮುಂದಾಗಿದೆ. ಗುಡ್ಡ ಜಾರಿದ ಕೆಳ ಭಾಗದಲ್ಲಿ ಕೆಲವು ಮನೆಗಳಿದ್ದು, ಜನ ವಾಸವಿದ್ದಾರೆ. ಮಣ್ಣು ಕುಸಿಯು ತ್ತಿರುವ ಬಗ್ಗೆ ಬಸ್ ಚಾಲಕ ಶ್ಯಾಂ ಎಂಬವರು ಮಾಧ್ಯಮ ಸ್ಪಂದನ ತಂಡಕ್ಕೆ ಮಾಹಿತಿ ನೀಡಿದ್ದಾರೆ.ಕಾರ್ಯಪ್ರವೃತ್ತರಾದ ತಂಡದ ರಾಖೇಶ್, ಪ್ರಜ್ವಲ್, ಮಣಿಕಂಠ ಅವರುಗಳು ಸ್ಥಳಕ್ಕೆ ಧಾವಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗಿ, ಸ್ಪಂದಿಸಿದ ಜಿಲ್ಲಾಧಿ ಕಾರಿಗಳು, ರಾಷ್ಟ್ರೀಯ ವಿಪತ್ತು ಜಿಲ್ಲಾ ಮುಖ್ಯಸ್ಥ ಅನನ್ಯ ವಾಸುದೇವ್ ಅವರಿಗೆ ಹಾಗೂ ಪೊಲೀಸರಿಗೆ ಸೂಚನೆ ನೀಡಿದ ಮೇರೆಗೆ ಅನನ್ಯ ಹಾಗೂ ನಗರ ಠಾಣಾಧಿಕಾರಿ ಅಂತಿಮ ಅವರುಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.ಮುನ್ನೆಚ್ಚರಿಕಾ ಕ್ರಮವಾಗಿ ಗುಡ್ಡದ ಕೆಳ ಭಾಗದಲ್ಲಿರುವ ಮನೆಗಳ ನಿವಾಸಿ ಗಳನ್ನು ಸ್ಥಳಾಂತರ ಗೊಳ್ಳುವಂತೆ ಮನವಿ ಮಾಡಿದ್ದಾರೆ. ಕೆಳ ಭಾಗದ ಮನೆಯೊಂದರಲ್ಲಿ ವೃದ್ಧ ದಂಪತಿಯರಾದ ಕೊಡಗಿನಲ್ಲಿ ಮಳೆ ವಿವರ ಮಡಿಕೇರಿ, ಜೂ, 17: ಕೊಡಗು ಜಿಲ್ಲೆಯಲ್ಲಿ ಮೋಡದ ವಾತಾವರಣದೊಂದಿಗೆ ಅಲ್ಲಲ್ಲಿ ತುಂತುರು ಮಳೆ ಹನಿಯತೊಡಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಬಹುತೇಕ ಸ್ಥಳಗಳಲ್ಲಿ ಮುಂಗಾರು ವಾತಾವರಣ ಗೋಚರಿಸುವಂತಾಗಿದೆ.

ಕಳೆದ 24 ಗಂಟೆಗಳಲ್ಲಿ ಜೀವನದಿ ಕಾವೇರಿಯ ಉಗಮಸ್ಥಳ ತಲಕಾವೇರಿಗೆ 3.12 ಇಂಚು ಮಳೆಯಾದರೆ, ಭಾಗಮಂಡಲ ಸುತ್ತಮುತ್ತ 2.76 ಇಂಚು ಮಳೆ ಬಿದ್ದಿದೆ. ಮಡಿಕೇರಿ ವ್ಯಾಪ್ತಿಯಲ್ಲಿ 1.49 ಇಂಚು, ವೀರಾಜಪೇಟೆ 0.74 ಇಂಚು, ಸೋಮವಾರಪೇಟೆಗೆ 0.32 ಇಂಚು ಮಳೆ ದಾಖಲಾಗಿದೆ. ಇನ್ನು ಸಿದ್ದಾಪುರ 0.24, ನಾಪೋಕ್ಲು 1.11 ಇಂಚು, ಸಂಪಾಜೆ 1.23 ಇಂಚು, ಗೋಣಿಕೊಪ್ಪಲು 0.39, ಪೊನ್ನಂಪೇಟೆ 0.47, ಕುಟ್ಟ 0.55 ಇಂಚು, ಶ್ರೀಮಂಗಲ 0.31 ಇಂಚು ದಾಖಲಾಗಿದೆ. ಶನಿವಾರಸಂತೆ ವ್ಯಾಪ್ತಿಗೆ 0.16 ಇಂಚು, ಕೊಡ್ಲಿಪೇಟೆ 0.49 ಇಂಚು, ಶಾಂತಳ್ಳಿ 0.78, ಸುಂಟಿಕೊಪ್ಪ 0.23, ಕುಶಾಲನಗರ 0.22 ಇಂಚು ಮಳೆಯಾಗಿದ್ದು, ಕೆಲವೆಡೆ ಮಳೆಯ ವಾತಾವರಣವಿದ್ದರೂ ಕೇವಲ ಮೋಡದೊಂದಿಗೆ ಗಾಳಿ ಕಂಡುಬಂದಿದೆ.

(ಮೊದಲ ಪುಟದಿಂದ) ಜೀನತ್ ಹಾಗೂ ಜಾಫರ್ ವಾಸವಿದ್ದು, ಓರ್ವರು ಅನಾರೋಗ್ಯ ಪೀಡಿತರಾಗಿದ್ದಾರೆ. ಚಾಮುಂಡೇಶ್ವರಿ ನಗರದ ಎಲ್ಲಾ ನಿವಾಸಿಗಳನ್ನು ಸ್ಥಳಾಂತರ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಮಡಿಕೇರಿ ಹೊರವಲಯದ ಗಾಳಿಬೀಡು ನವೋದಯ ಶಾಲೆಗೆ ಸ್ಥಳಾಂತರ ಮಾಡಲು ತಯಾರಿ ನಡೆಸಲಾಗಿದೆ. ಮಳೆಯಿಂದಾಗಿ ಮಣ್ಣು ತೇವಗೊಂಡಿರುವ ಹಿನ್ನೆಲೆಯಲ್ಲಿ ಈ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ. ಸ್ಥಳಕ್ಕೆ ರಕ್ಷಣಾ ಪಡೆ ಆಗಮಿಸಿ ಕಾರ್ಯಾಚರಣೆ ಕೈಗೊಂಡಿದೆ. ಚಾಮುಂಡೇಶ್ವರಿ ನಗರದಲ್ಲಿ 2018ರಲ್ಲಿ ಭೂಕುಸಿತ ಉಂಟಾಗಿ ಹಲವಷ್ಟು ಮನೆಗಳು ಧರಾಶಾಹಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.