ನಾಪೆÇೀಕ್ಲು, ಜೂ. 14: ನಾಪೆÇೀಕ್ಲು ಪಟ್ಟಣದ ಇಂದಿರಾನಗರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಖುರೇಶಿ ಮತ್ತು ಸಹೋದರ ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದು ಹನೀಫ ಎಂಬವರ ಮನೆಗೆ ಅಕ್ರಮ ಪ್ರವೇಶ ಮಾಡಿ ದಂಪತಿ ಮತ್ತು ಮಗಳ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ನಾಪೆÇೀಕ್ಲು ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಐಪಿಸಿ ಸೆಕ್ಷನ್ 354 323. 448 427 504 506 ಆರ್.ಡಬ್ಲ್ಯೂ 34 ಐಪಿಸಿ ಪ್ರಕರಣ ದಾಖಲಿಸಲಾಗಿದೆ.

ಹಾಗೆಯೇ ಖುರೇಶಿ ಸಹೋದರ ಅಶ್ಕರ್ ಅವರು ನೀಡಿದ ದೂರಿನ ಅನ್ವಯ ಹನೀಫ್ ದಂಪತಿ ವಿರುದ್ಧ ಸೆಕ್ಷನ್ 324ರಲ್ಲಿ ಪ್ರಕರಣ ದಾಖಲಿಸಿ ನಾಪೆÇೀಕ್ಲು ಪೆÇಲೀಸರು ಕ್ರಮಕೈಗೊಂಡಿದ್ದಾರೆ.