ಸೋಮವಾರಪೇಟೆ, ಜೂ.15: ನಿನ್ನೆ ದಿನ ಅಸುನೀಗಿದ ಮಗನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ತಂದೆ, ಇಂದು ಮನೆಯಲ್ಲಿ ಸಾವನ್ನಪ್ಪಿದ ಘಟನೆ ಸಮೀಪದ ಹಾನಗಲ್ಲು ಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ. ಹಾನಗಲ್ಲುಶೆಟ್ಟಳ್ಳಿ ಗ್ರಾಮದ ನಿವಾಸಿ ಶಿವಪ್ಪ ಅವರ ಪುತ್ರ ರಮೇಶ್ (38) ಎಂಬಾತ ನಿನ್ನೆ ದಿನ ಅಕಾಲಿಕವಾಗಿ ದುರ್ಮರಣ ಕ್ಕೀಡಾಗಿದ್ದು, ಮಗನ ಅಂತ್ಯಕ್ರಿಯೆ ಯನ್ನು ನೆರವೇರಿಸಿದ ತಂದೆ ಸಂಜೆ ಮನೆಗೆ ಮರಳಿದ್ದರು.ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಶಿವಪ್ಪ ಅವರು ತಡರಾತ್ರಿ 1.45ಕ್ಕೆ ಮನೆಯಲ್ಲಿ ಕೊನೆಯುಸಿರೆಳೆದಿದ್ದು, ಮಗನ ಚಿತೆಯ ಬೆಂಕಿ ಆರುವ ಮುನ್ನವೇ ಪಕ್ಕದಲ್ಲಿಯೇ ಅಪ್ಪನ ಅಂತ್ಯಕ್ರಿಯೆ ಯನ್ನು ಗ್ರಾಮಸ್ಥರು ನೆರವೇರಿಸಿ ದರು. ಮೃತ ಶಿವಪ್ಪ ಅವರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.