ಕೂಡಿಗೆ, ಜೂ. 15 : ಕೂಡುಮಂಗಳೂರು ಗ್ರಾ.ಪಂ.ವ್ಯಾಪ್ತಿಯ ಬಸವನತ್ತೂರು ಗ್ರಾಮಕ್ಕೆ ಹೊಂದಿಕೊಂಡಿರುವ ಆನೆಕೆರೆ ರಸ್ತೆಯು ಹಾರಂಗಿ ಮುಖ್ಯ ರಸ್ತೆ ಜೋಡಣೆಯ ರಸ್ತೆಯಾಗಿದ್ದು, ತೀರ ಹಾಳಾಗಿದ್ದು ದುರಸ್ತಿಪಡಿಸು ವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ರಸ್ತೆಯು ಹಾಳಾಗಿದ್ದು, ಬಾರಿ ಗುಂಡಿಗಳಿಂದ ದ್ವಿಚಕ್ರ ವಾಹನಗಳು ಸಹ ಚಲಿಸಲು ಸಾಧ್ಯವಾಗುತ್ತಿಲ್ಲ, ಅಲ್ಲದೆ ಈ ಮಾರ್ಗದಲ್ಲಿ ಅನೇಕ ಅಪಘಾತಗಳು ಸಂಭವಿಸಿದ ಘಟನೆಗಳು ನಡೆದಿವೆ. ಕಳೆದ ನಾಲ್ಕು ವರ್ಷಗಳ ಹಿಂದೆ ಜಿ.ಪಂ.ಅನುದಾನದಲ್ಲಿ ಕೆಲ ಅಂತರದವರೆಗೆ ಈ ರಸ್ತೆಯ ಡಾಂಬರೀಕರಣ ನಡೆದಿತ್ತು. ಆದರೆ ಅದು ಸೇರಿದಂತೆ ಮೂರು ಕಿ.ಲೋ.ವರೆಗಿನ ರಸ್ತೆಯು ಹಾಳಾಗಿದ್ದು, ಮಳೆಗಾಲದಲ್ಲಿ ಗ್ರಾಮಸ್ಥರು ತಿರುಗಾಡಲು ಸಾಧ್ಯವಾಗು ತ್ತಿಲ್ಲಾ ಆದರಿಂದ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಇತ್ತ ಗಮನಹರಿಸಿ ರಸ್ತೆಯ ಕಾಮಗಾರಿಯನ್ನು ನಡೆಸಬೇಕೆಂದು ಈ ವ್ಯಾಪ್ತಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.