ಗುಡ್ಡೆಹೊಸೂರು, ಜೂ. 14: ಮಂಗಾರು ಮಳೆ ಪ್ರಾರಂಭವಾಗಿದೆ. ರೈತರು ಇದೀಗ ತಮ್ಮ ಹೊಲಗಳನ್ನು ಉಳುಮೆಮಾಡಿ ಮುಸುಕಿನ ಜೋಳ ಬಿತ್ತನೆ ಮಾಡಲು ಪ್ರಾರಂಭಿಸಿದ್ದಾರೆ.
ಬಹಳಷ್ಟು ರೈತರ ಬೆಳೆ ಮೊದಲ ಹಂತದ ರಸಗೊಬ್ಬರ ನೀಡುವ ಹಂತದಲ್ಲಿದೆ. ಕಳೆದ ಜೂನ್ ತಿಂಗಳಲ್ಲಿ ಮಳೆ ಕಡಿಮೆ ಇದ್ದು ಜೋಳ ಬಿತ್ತನೆಗೆ ರೈತರು ಆಕಾಶ ನೋಡುವಂತಾಗಿತ್ತು. ಆದರೆ ಈ ಭಾರಿ ಜೋಳದ ಬೇಳೆಗೆ ಸರಿಯಾದ ರೀತಿಯಲ್ಲಿ ಮಳೆ ಬರುತ್ತಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಉತ್ತಮ ಬೆಲೆ ನಿರೀಕ್ಷೆಯಲ್ಲಿ ರೈತರು ಮುಸುಕಿನ ಬೆಳೆ ಬೆಳೆಯಲು ಮುಂದಾಗಿದ್ದಾರೆ.