ಚೆಟ್ಟಳ್ಳಿ, ಜೂ. 14: ಕಳೆದ ಭಾರಿ ಸುರಿದ ಮಹಾ ಮಳೆಯ ಪ್ರವಾಹದಿಂದ ಕಾವೇರಿ ನದಿ ಉಕ್ಕಿ ಹರಿದು ಸಿದ್ದಾಪುರ ಸುತ್ತಮುತ್ತಲ ನದಿದಡ ಗ್ರಾಮಗಳ ಮನೆಗಳು ಹಾನಿಯಾಗಿ ಸಂಕಷ್ಟದ ಬದುಕು ಎದುರಿಸುತ್ತಿರುವ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಿಕೊಡಬೇಕೆಂದು ಸಿಪಿಐ(ಎಂ) ಪಕ್ಷದ ಕಾರ್ಯದರ್ಶಿ ಎನ್.ಡಿ ಕುಟ್ಟಪ್ಪ ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಬಾರಿಯ ಪ್ರವಾಹಕ್ಕೆ ಮನೆ.ಆಸ್ತಿಪಾಸ್ತಿ ಕಳೆದುಕೊಂಡಿರುವ ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಕರಡಿಗೋಡು ಹಾಗೂ ಗುಹ್ಯ ಗ್ರಾಮದ ಸಂತ್ರಸ್ತ ಕುಟುಂಬಗಳು ಶಾಶ್ವತ ಸೂರು ಸಿಗದೆ ಸಂಕಷ್ಟದಲ್ಲಿದ್ದಾರೆ.

ಇದೀಗ ಮತ್ತೆ ಮಳೆ ಪ್ರಾರಂಭವಾಗಿದ್ದು ಸಂತ್ರಸ್ತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಕೂಡಲೇ ಶಾಶ್ವತ ಸೂರು ಕಲ್ಪಿಸಬೇಕೆಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಿಪಿಐ (ಎಂ)ಪಕ್ಷದ ಪದಾಧಿಕಾರಿಗಳಾದ ರಮೇಶ್, ಸಾಲಿ ಪೌಲೋಸ್, ಮಂಜು ಹಾಜರಿದ್ದರು.