ನಾಪೆÇೀಕ್ಲು, ಜೂ. 14: ಚೇಲಾವರ ಗ್ರಾಮದ ಹೊಸೋಕ್ಲು ರಘುನಂದ (ಡಾಲಿ) ಎಂಬವರ ಮನೆಯ ಅಂಗಳದಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿ ಮನೆಯವರು ಭಯಬೀತರಾದ ಘಟನೆ ತಾ. 13ರ ರಾತ್ರಿ ನಡೆದಿದೆ. ಕಾಡಾನೆಗಳ ಹಿಂಡು ಮನೆಯಂಗಳಕ್ಕೆ ಬಂದಾಗ ಮನೆಯವರು ಗಾಬರಿಯಿಂದ ಜೋರಾಗಿ ಕಿರುಚಿಕೊಂಡಾಗ ಆನೆಗಳು ಅಲ್ಲಿಂದ ಓಡಿಹೋಗಿವೆ. ಈ ವಿಭಾಗದಲ್ಲಿ ನಿರಂತರ ಕಾಡಾನೆಗಳ ಹಾವಳಿ ಇದ್ದು, ಈ ಬಗ್ಗೆ ಹಲವಾರು ಬಾರಿ ಅರಣ್ಯಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಕಾಡಾನೆ ಹಿಂಡು ದಾಳಿ ನಡೆಸಿರುವುದರಿಂದ ಈ ಭಾಗದ ಅಪ್ಪಚ್ಚ, ಪೊನ್ನಮ್ಮ, ಹರೀಶ್, ಆನಂದ ಎಂಬವರುಗಳ ಕಾಫಿ, ಬಾಳೆ ತೋಟಗಳು ನಾಶವಾಗಿವೆ. ಸರಕಾರ ಇವರಿಗೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

- ದುಗ್ಗಳ.