ಕೂಡಿಗೆ, ಜೂ. 14: ಶ್ರೀ ದಂಡಿನಮ್ಮ ಮತ್ತು ಬಸವೇಶ್ವರ ದೇವಸ್ಥಾನ ಸೇವಾ ಸಮಿತಿ ಕೂಡಿಗೆ- ಕೊಪ್ಪಲು ಹೆಗ್ಡಳ್ಳಿ ಇವರ ವತಿಯಿಂದ ಗ್ರಾಮ ದೇವತೆ ದಂಡಿನಮ್ಮ ತಾಯಿಯ ಪೂಜೋತ್ಸವ ಕಾರ್ಯಕ್ರಮ ನೆಡೆಯಿತು.

ತಾ.8 ರಂದು ಸಂಜೆ 7 ಗಂಟೆಗೆ ಬಸವೇಶ್ವರ ದೇವರ ಪೂಜೆ. ನಡೆದು ಗಣಪತಿ ಹೋಮ ಮತ್ತು ದಂಡಿನಮ್ಮ ತಾಯಿಗೆ ಶಾಂತಿ ಹೋಮ ಮಧ್ಯಾಹ್ನ ಮಹಾಮಂಗಳಾತಿ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆದವು.

ಪೂಜಾ ಕೈಂಕರ್ಯವನ್ನು ಕಣಿವೆಯ ರಾಮಲಿಂಗೇಶ್ವರ ದೇವಾಲಯದ ಪ್ರಧಾನ ಅರ್ಚಕ ರಾಘವೇಂದ್ರ ಅಚಾರ್ಯ ಸೇರಿದಂತೆ ತಂಡದವರು ಶಾಂತಿ ಪೂಜೆಯ ಹೋಮ ಹವನಗಳನ್ನು ನಡೆಸಿದರು.

ಈ ಶಾಂತಿ ಪೂಜೋತ್ಸವದ ಸಂದರ್ಭದಲ್ಲಿ ದೇವಾಲಯ ಸಮಿತಿಯ. ಅಧ್ಯಕ್ಷ ಭೀಮಣ್ಣ ಕಾರ್ಯದರ್ಶಿ ರಂಗ (ಮಲ್ಲೇಶ್) ಸೇರಿದಂತೆ ದೇವಾಲಯ ಸಮಿತಿಯ ನಿರ್ದೇಶಕರು ಮಾಜಿ ಅಧ್ಯಕ್ಷರುಗಳು ಹಾಗೂ ಕೂಡಿಗೆ ಕೊಪ್ಪಲು ಹೆಗ್ಗಡ ಹಳ್ಳಿ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.