ಮಡಿಕೇರಿ ಜೂ. 13: ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದಲ್ಲಿರುವ ಗೋಮಾಳದ ಜಮೀನನ್ನು ಉಳಿಸಿಕೊಳ್ಳಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳದೆ ಜಿಲ್ಲಾಡಳಿತ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುತ್ತಲೇ ಬರುತ್ತಿದೆ ಎಂದು ಕೊಡಗು ಜಿಲ್ಲಾ ಗೋಮಾಳ ಹಿತರಕ್ಷಣಾ ಸಮಿತಿಯ ಸಂಚಾಲಕ ಮಾಚೀಮಾಡ ರವೀಂದ್ರ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1960ರಲ್ಲಿ ಆರ್ಜಿ ಗ್ರಾಮದ ಸ.ನಂ 315/1ರಲ್ಲಿ 89.06 ಎಕರೆ ಜಮೀನನ್ನು ಗೋಮಾಳವಾಗಿ ಮೀಸಲಿರಿಸಿ ಆಗಿನ ಜಿಲ್ಲಾಡಳಿತ ಆದೇಶ ನೀಡಿತ್ತು. ಆದರೆ ನಂತರ ಬಂದ ಅಧಿಕಾರಿಗಳು ಗೋಮಾಳದ ಜಾಗವನ್ನು ಸಂರಕ್ಷಿಸಿಕೊಳ್ಳುವಲ್ಲಿ ವಿಫಲರಾದರು.
ಗೋಮಾಳದ ಜಮೀನು ಮಡಿಕೇರಿ ಜೂ. 13: ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದಲ್ಲಿರುವ ಗೋಮಾಳದ ಜಮೀನನ್ನು ಉಳಿಸಿಕೊಳ್ಳಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳದೆ ಜಿಲ್ಲಾಡಳಿತ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುತ್ತಲೇ ಬರುತ್ತಿದೆ ಎಂದು ಕೊಡಗು ಜಿಲ್ಲಾ ಗೋಮಾಳ ಹಿತರಕ್ಷಣಾ ಸಮಿತಿಯ ಸಂಚಾಲಕ ಮಾಚೀಮಾಡ ರವೀಂದ್ರ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1960ರಲ್ಲಿ ಆರ್ಜಿ ಗ್ರಾಮದ ಸ.ನಂ 315/1ರಲ್ಲಿ 89.06 ಎಕರೆ ಜಮೀನನ್ನು ಗೋಮಾಳವಾಗಿ ಮೀಸಲಿರಿಸಿ ಆಗಿನ ಜಿಲ್ಲಾಡಳಿತ ಆದೇಶ ನೀಡಿತ್ತು. ಆದರೆ ನಂತರ ಬಂದ ಅಧಿಕಾರಿಗಳು ಗೋಮಾಳದ ಜಾಗವನ್ನು ಸಂರಕ್ಷಿಸಿಕೊಳ್ಳುವಲ್ಲಿ ವಿಫಲರಾದರು.
ಗೋಮಾಳದ ಜಮೀನು 2016 ಜೂನ್ 17 ರಂದು ಉಳಿದ 47.47 ಎಕರೆ ಜಮೀನನ್ನು ಗೋಮಾಳಕ್ಕಾಗಿ ಉಳಿಸಿಕೊಳ್ಳಲು ನ್ಯಾಯಾಲಯ ಆದೇಶ ನೀಡಿದರೂ ಕೇವಲ 15.12 ಎಕರೆಯಷ್ಟನ್ನು ಮಾತ್ರ ಮೀಸಲಿಟ್ಟು ಉಳಿದ ಜಾಗವನ್ನು ಹೆಗ್ಗಳ ಗ್ರಾಮದಲ್ಲಿ ಗುರುತಿಸಲಾಯಿತು. ಇದು ಆರ್ಜಿ ಗ್ರಾಮದಿಂದ 10 ಕಿ.ಮೀ ದೂರದಲ್ಲಿದ್ದು, ಬಾಳುಗೋಡು ಮತ್ತು ಬೇಟೋಳಿ ಗ್ರಾಮಗಳಿಂದ ಹಸುಗಳನ್ನು ಕರೆದೊಯ್ದು ಮೇಯಿಸಲು ಸಾಧ್ಯವಿಲ್ಲವೆಂದು ರವೀಂದ್ರ ಹೇಳಿದರು.
ಜಿಲ್ಲಾಡಳಿತ ಈ ಹಿಂದೆ ಇದ್ದ ಪ್ರದೇಶದಲ್ಲೇ 89.06 ಎಕರೆ ಜಮೀನನ್ನು ಸಂಪೂರ್ಣವಾಗಿ ಗೋಮಾಳಕ್ಕೆಂದು ಮೀಸಲಿಟ್ಟು ಸಂರಕ್ಷಿಸಬೇಕೆಂದು ಒತ್ತಾಯಿಸಿದರು. ಗೋಮಾಳದ ಜಾಗದಲ್ಲಿ ತಲೆ ಎತ್ತಿರುವ ಅನಧಿಕೃತ ಕಟ್ಟಡಗಳನ್ನು ತಕ್ಷಣ ತೆರವುಗೊಳಿಸಬೇಕು ಮತ್ತು ಗೋಮಾಳದ ಜಾಗಕ್ಕೆ ನಾಮಫಲಕ ಹಾಕಬೇಕು ಎಂದು ಒತ್ತಾಯಿಸಿದ ಅವರು ಜಿಲ್ಲಾಡಳಿತ ತನ್ನ ಜವಾಬ್ದಾರಿ ಯಿಂದ ನುಣುಚಿಕೊಂಡರೆ ಹಿತರಕ್ಷಣಾ ಸಮಿತಿಯಿಂದ ಹೋರಾಟವನ್ನು ತೀವ್ರ ಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಸಮಿತಿಯ ಸದಸ್ಯರುಗಳು ಹಾಗೂ ಹಿಂದೂ ಜಾಗರಣಾ ವೇದಿಕೆ ಮೈಸೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಕೆ.ವಿ. ಜೀವನ್, ಜಿಲ್ಲಾಧ್ಯಕ್ಷ ಮೇವಡ ಅಯ್ಯಣ್ಣ, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವೀರಾಜಪೇಟೆ ಪ್ರಮುಖ್ ಬಿ.ವಿ. ಹೇಮಂತ್ ಮತ್ತು ಭಜರಂಗ ದಳದ ವೀರಾಜಪೇಟೆ ತಾಲೂಕು ಸಂಚಾಲಕ ವಿವೇಕ್ ರೈ ಉಪಸ್ಥಿತರಿದ್ದರು.