ಮಡಿಕೇರಿ, ಜೂ. 13: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಳ್ಳುತ್ತಿದ್ದು, ಪದಗ್ರಹಣ ಸಮಾರಂಭದ ಹಿನ್ನೆಲೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಝೂಮ್ ಲೈವ್ ಆ್ಯಪ್ ಮೂಲಕ ವೀಡಿಯೋ ಸಂವಾದ ನಡೆಯಿತು.

ರಾಜ್ಯಾದ್ಯಂತ ಏಕಕಾಲದಲ್ಲಿ ನಡೆದ ಈ ಸಂವಾದದಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಪ್ರಮುಖರು ಜಿಲ್ಲಾ ಮುಖಂಡರನ್ನುದ್ದೇಶಿಸಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಮಾತನಾಡಿ, ಪದಗ್ರಹಣ ಸಮಾರಂಭಕ್ಕೆ ಕೊಡಗು ಜಿಲ್ಲೆಯ ವಿವಿಧ ಬ್ಲಾಕ್‍ಗಳಲ್ಲಿ ಕೈಗೊಂಡಿರುವ ಪೂರ್ವ ತಯಾರಿ ಬಗ್ಗೆ ಮತ್ತು ಕೈಗೊಳ್ಳಬೇಕಾಗಿರುವ ವ್ಯವಸ್ಥೆಗಳ ಬಗ್ಗೆ ವಿವರಿಸಿದರು.

ಲಾಕ್‍ಡೌನ್ ದಿನಗಳಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳು ಹಾಗೂ ವಿತರಿಸಲಾದ ಪರಿಹಾರಗಳ ಬಗ್ಗೆ ನೇರ ಪ್ರಸಾರದಲ್ಲಿ ಮಾಹಿತಿ ನೀಡಿದರು. ಪಕ್ಷದ ಹಿರಿಯ ಮುಖಂಡ ಹೆಚ್.ಎಸ್. ಚಂದ್ರಮೌಳಿ, ಕೆಪಿಸಿಸಿ ಸದಸ್ಯ ಟಿ.ಪಿ. ರಮೇಶ್, ಕೆಪಿಸಿಸಿ ಉಸ್ತುವಾರಿಗಳಾದ ಎಂ. ವೆಂಕಪ್ಪಗೌಡ ಹಾಗೂ ಟಿ.ಎಂ. ಶಾಹಿದ್ ಮಾತನಾಡಿದರು.

ಕೆಪಿಸಿಸಿಯಿಂದ ನಿಯೋಜನೆಗೊಂಡಿರುವ ವೀಕ್ಷಕ ಪ್ರದೀಪ್ ರೈ, ಜಿ.ಬಿ. ಜಾನ್, ಸಾಮಾಜಿಕ ಜಾಲತಾಣ ಮೈಸೂರು ವಿಭಾಗದ ಅಧ್ಯಕ್ಷ ಐ.ಜಿ. ಚಿನ್ನಪ್ಪ, ಕೊಡಗು ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ರಂಜಿ ಪೂಣಚ್ಚ, ಮೇದೀರಿರ ನವೀನ್, ಇಸ್ಮಾಯಿಲ್, ಬಿ.ಎಸ್. ಅನಂತ್‍ಕುಮಾರ್, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್ ಹಾಗೂ ಡಿಸಿಸಿ ಪದಾಧಿಕಾರಿಗಳು, ವಿವಿಧ ಘಟಕಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಮತ್ತು ಮುಖಂಡರುಗಳು ಹಾಜರಿದ್ದರು.

ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮೇಲುಸ್ತುವಾರಿಯಲ್ಲಿ ಕಾರ್ಯಕ್ರಮ ನಡೆಯಿತು.ಕಡಂಗ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ನೂತನ ರಾಜ್ಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಕಡಂಗದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.ಚೆಯ್ಯಂಡಾಣೆ ವಲಯ ಕಾಂಗ್ರೆಸ್ ಅಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಈ ಭಾಗದಲ್ಲಿ ಪಕ್ಷದ ಬಲವರ್ಧನೆಗೆ ತಳಮಟ್ಟದಿಂದ ಕಾರ್ಯ ರೂಪಿಸಬೇಕು ಎಂದು ಪ್ರಮುಖರು ಅಭಿಪ್ರಾಯಪಟ್ಟರು. ಸಭೆಯಲ್ಲಿ ಡಿಸಿಸಿ ಸದಸ್ಯೆ ಮಣಿ ಅಯ್ಯಮ್ಮ, ವಕ್ಫ್ ಬೋರ್ಡ್ ಮಾಜಿ ಸದಸ್ಯ ಶಾಫಿ ಎಡಪ್ಪಲ, ಬ್ಲಾಕ್ ಮೈನಾರಿಟಿ ಅಧ್ಯಕ್ಷ ಸುಬೀರ್ ಕಡಂಗ, ಮೈನಾರಿಟಿ ಮಾಜಿ ಕಾರ್ಯದರ್ಶಿ ಮಹಮ್ಮದ್, ವಿಠಲ, ಅಬ್ದುಲ್ಲಾ, ಕುಂಞ ಅಹ್ಮದ್, ಅಜರ್ ಪಾಲ್ಗೊಂಡಿದ್ದರು. - ನೌಫಲ್