ಶನಿವಾರಸಂತೆ, ಜೂ. 13: ಕೊಡ್ಲಿಪೇಟೆ ಹೋಬಳಿ ಬೆಂಬಳೂರು ಗ್ರಾಮದ ಹೊಳೆಯಿಂದ ತಾ. 11 ರಂದು ರಾತ್ರಿ ಮರಳನ್ನು ಲಾರಿ(ಕೆಎ-13 ಎ-0589)ಯಲ್ಲಿ ಅಕ್ರಮವಾಗಿ ತುಂಬಿಸಿಕೊಂಡು ಕುಶಾಲನಗರ ಕಡೆಗೆ ಸಾಗಿಸುತ್ತಿದ್ದಾಗ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆ ಶನಿವಾರಸಂತೆ ಪೊಲೀಸರು ಲಾರಿ ಹಾಗೂ ಮರಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಚಾಲಕ ಪರಾರಿಯಾಗಿದ್ದಾನೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಗಳಾದ ವಿನಯ್, ರವಿಚಂದ್ರ, ವಿವೇಕ್, ಶಫೀರ್ ಇತರರು ಪಾಲ್ಗೊಂಡಿದ್ದರು.

*ಕೊಡ್ಲಿಪೇಟೆ ಹೋಬಳಿ ಹಂಪಾಪುರದ ಬಳಿ ಹರಿಯುತ್ತಿರುವ ಹೇಮಾವತಿ ನದಿಯಲ್ಲಿ ತಾ. 12 ರಂದು ಮರಳನ್ನು ಅಕ್ರಮವಾಗಿ ಟ್ರ್ಯಾಕ್ಟರ್(ಕೆಎ-45 ಟಿಎ-5358)ನಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯನ್ವಯ ಶನಿವಾರಸಂತೆ ಪೊಲೀಸರು ಟ್ರ್ಯಾಕ್ಟರ್ ಹಾಗೂ ಮರಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಚಾಲಕ ಪರಾರಿಯಾಗಿದ್ದಾನೆ.