ಮಡಿಕೇರಿ, ಜೂ. 12: ಪೊನ್ನಂಪೇಟೆ ಬಿ.ಯಂ. ಲೇಔಟ್ನ ಹಿರಿಯ ನಾಗರಿಕರಿಂದ ‘ಕಿಗ್ಗಟ್ನಾಡ್ ಹಿರಿಯ ನಾಗರಿಕರ ವೇದಿಕೆ’ ಅಸ್ತಿತ್ವಕ್ಕೆ ತರಲಾಗಿದೆ. ಮೇ 17 ರಂದು ಸ್ಥಾಪನೆಗೊಂಡ ಈ ವೇದಿಕೆಯ ಅಧ್ಯಕ್ಷರಾಗಿ ಚಕ್ಕೇರ ಕೆ. ಸನ್ನಿ ಸುಬ್ಬಯ್ಯ, ಉಪಾಧ್ಯಕ್ಷರಾಗಿ ಪುಳ್ಳಂಗಡ ಸುಜಾ, ಕಾರ್ಯದÀರ್ಶಿಯಾಗಿ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಜಂಟಿ ಕಾರ್ಯದರ್ಶಿಯಾಗಿ ನಿವೃತ್ತ ಎ.ಎಸ್.ಐ. ಇಟ್ಟೀರ ಸಿ. ಸುಬ್ರಮಣಿ, ಖಜಾಂಚಿಯಾಗಿ ನಿವೃತ್ತ ಶಿಕ್ಷಕ ಕಾಳಿಮಾಡ ಎಂ. ಮೋಟಯ್ಯ ಹಾಗೂ ಆಂತರಿಕ ಲೆಕ್ಕಪರಿ ಶೋಧಕರಾಗಿ ನಿವೃತ್ತ ದೈಹಿಕ ಶಿಕ್ಷಕ ಮಂಡೇಚಂಡ ಗಣೇಶ್ ಗಣಪತಿ ಕಾರ್ಯನಿರ್ವಹಿಸಲಿದ್ದಾರೆ.
ಹಿರಿಯ ನಾಗರಿಕರಲ್ಲಿ ಹಲವು ಮಂದಿ ಅನಕ್ಷರಸ್ಥ, ಅರ್ಧಕ್ಷರಸ್ಥರಿದ್ದು, ಇವರುಗಳಿಗೆ ಕೊರೊನಾ ನಿಯಂತ್ರಣ ಕುರಿತು ಮಾಹಿತಿ ನೀಡಿ ಅರಿವು ಮೂಡಿಸುವುದು, ಸರಕಾರವು ಬಡಜನರಿಗೆ ಘೋಷಿಸಿರುವ ಅನುಕೂಲಗಳ ಬಗ್ಗೆ, ಅವಿದ್ಯಾವಂತ ಬಡ ಹಿರಿಯ ನಾಗರಿಕರಿಗೆ ಅರಿವು ಮೂಡಿಸುವುದು, ಹಿರಿಯ ನಾಗರಿಕರಿಗೆ ಯಾವುದೇ ಸಮಸ್ಯೆ ಬಂದಲ್ಲಿ ಅದರ ಪರಿಹಾರಕ್ಕೆ ಕಾರ್ಯರೂಪಿಸಿಕೊಂಡು ಅನುಕೂಲ ಕಲ್ಪಿಸುವುದು ವೇದಿಕೆಯ ಮುಖ್ಯ ಉದ್ದೇಶವಾಗಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.