*ಕೊಡ್ಲಿಪೇಟೆ, ಜೂ.12: ಮಳೆಗಾಲ ಪ್ರಾರಂಭವಾಗಿರುವ ಹಿನ್ನೆಲೆ ಜಿಲ್ಲೆಯಲ್ಲಿ ಅಗತ್ಯ ಸೇವೆಗಳ ಹೊರತಾಗಿ ಭಾರೀ ವಾಹನಗಳ ಸಂಚಾರಕ್ಕೆ ಜಿಲ್ಲಾಧಿಕಾರಿ ಗಳು ನಿಷೇಧ ಹೇರಿದ್ದರೂ ಸಹ ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಮರಳು ಸಾಗಾಟದ ವಾಹನಗಳು ಹಗಲೂ ರಾತ್ರಿ ಸದ್ದು ಮಾಡುತ್ತಿವೆ.
ಮರಳು ಮತ್ತು ಮರ ಸಾಗಾಟದ ವಾಹನಗಳ ಸಂಚಾರವನ್ನು ತಾ. 11ರಿಂದ ಸ್ಥಗಿತಗೊಳಿಸಿ, ಜಿಲ್ಲಾಧಿಕಾರಿ ಗಳು ಆದೇಶ ಹೊರಡಿಸಿದ್ದು, ನಿನ್ನೆ ಹಾಗೂ ಇಂದು ತರಾತುರಿಯಲ್ಲಿ ಮರ ಹಾಗೂ ಮರಳಿನ ಸಾಗಾಟ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದರೊಂದಿಗೆ ಕೊಡ್ಲಿಪೇಟೆಯ ಗಡಿಭಾಗದಲ್ಲಿ ಹರಿಯುವ ಹೇಮಾವತಿ ಹಿನ್ನೀರು ಪ್ರದೇಶದಿಂದ ಅಕ್ರಮವಾಗಿ ಮರಳು ತೆಗೆಯುವ ಕೆಲಸವೂ ನಡೆಯುತ್ತಿದ್ದು, ಇಲಾಖೆ ಯ ಅಧಿಕಾರಿಗಳು ಇತ್ತ ಗಮನಹರಿಸ ಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈಗಾಗಲೇ ನದಿಯಿಂದ ತೆಗೆದು ಸಂಗ್ರಹಿಸಿಟ್ಟಿರುವ ಮರಳನ್ನು ಅಕ್ರಮವಾಗಿ ಸಾಗಾಟಗೊಳಿಸಲಾಗುತ್ತಿದ್ದು, ರಾತ್ರಿ ವೇಳೆ ಭಾರೀ ಪ್ರಮಾಣದ ವಾಹನ ಗಳು ಕೊಡ್ಲಿಪೇಟೆಯ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಸದ್ದು ಮಾಡುತ್ತಿವೆ. ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆ ತರಾತುರಿಯಲ್ಲಿ ಮರಳು ಸಾಗಾಟ ಗೊಳಿಸಲಾಗುತ್ತಿದೆ. ಜಿಲ್ಲೆಯ ಗಡಿಯನ್ನು ದಾಟಿ ಹೊರಜಿಲ್ಲೆಗಳಿಗೂ ಮರಳಿನ ವಾಹನಗಳು ತೆರಳುತ್ತಿದ್ದು, ಈ ಬಗ್ಗೆ ಗಡಿಯಲ್ಲಿ ಕಟ್ಟೆಚ್ಚರ ವಹಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.ವಾಹನಗಳು ತೆರಳುತ್ತಿದ್ದು, ಈ ಬಗ್ಗೆ ಗಡಿಯಲ್ಲಿ ಕಟ್ಟೆಚ್ಚರ ವಹಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.