ಸಿದ್ದಾಪುರ, ಜೂ.12 : ಕಾಫಿ ತೋಟದೊಳಗೆ ಮರದ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವನಿಗೆ ಮರ ಎಳೆಯುವ ಕ್ರೇನ್ ತಗುಲಿ ಗಂಭೀರ ಗಾಯಗೊಂಡಿರುವ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ಸಿದ್ದಾಪುರದ ಕೈರಾಸ್ ಕಾಫಿ ತೋಟದಲ್ಲಿ ಕ್ರೇನ್‍ನಲ್ಲಿ ಮರಗಳನ್ನು ಲೋಡ್ ಮಾಡುವ ಸಂದರ್ಭದಲ್ಲಿ ಹೆಂಡ್ರಿ ಎಂಬ ಕಾರ್ಮಿಕನ ಎರಡು ಕಾಲುಗಳಿಗೆ ಗಂಭೀರವಾಗಿ ಗಾಯವಾಗಿದೆ. ಗಾಯಾಳನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧಿಸಿ ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಪ್ರಕರಣ ದಾಖಲಿಸಿಕೊಂಡು ಮುಸ್ತಫಾ ಎಂಬವರಿಗೆ ಸೇರಿದ ಕ್ರೇನ್ ವಶಪಡಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.