ಮಡಿಕೇರಿ, ಜೂ. 12 : ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಕುಟುಂಬ ಕೊಡಗಿಗೆ ಖಾಸಗಿ ಭೇಟಿ ನೀಡಿದ್ದಾರೆ. ಮಡಿಕೇರಿ ಹೊರವಲಯದಲ್ಲಿರುವ ತಾಜ್ ವಿವಂತ ರೆಸಾರ್ಟ್‍ಗೆ ಶುಕ್ರವಾರ ಭೇಟಿ ನೀಡಿದ್ದಾರೆ.ಹೆಚ್‍ಡಿಕೆ, ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ದಂಪತಿ ಹಾಗೂ ಕುಮಾರಸ್ವಾಮಿ ಸಹೋದರಿಯರು ಸೇರಿದಂತೆ ಒಟ್ಟು ಅವರ ಕುಟುಂಬದ ಸುಮಾರು ಹತ್ತು ಮಂದಿ ಜೊತೆಯಾಗಿಯೇ ರೆಸಾರ್ಟ್ ವಾಸ್ತವ್ಯಕ್ಕೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.ನಿಖಿಲ್ ಮದುವೆ ಆದ ಬಳಿಕ ಇದೇ ಮೊದಲ ಬಾರಿಗೆ ಕುಟುಂಬ ಸದಸ್ಯರೊಂದಿಗೆ ಹಾಸನ ಜಿಲ್ಲೆಯ ಹೊಳೆನರಸೀಪುರ ಮಾರ್ಗವಾಗಿ ಖಾಸಗಿ ರೆಸಾರ್ಟ್‍ಗೆ ಆಗಮಿಸಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಅಂದರೆ ಭಾನುವಾರದವರೆಗೆ ರೆಸಾರ್ಟ್‍ನಲ್ಲೇ ತಂಗಲಿದ್ದಾರೆ ಎನ್ನಲಾಗಿದೆ. ನಿಖಿಲ್ ಅವರ ಮದುವೆ ಇತ್ತೀಚೆಗೆ ಅಷ್ಟೇ ಆಗಿರುವುದರಿಂದ ಇಡೀ ಕುಟುಂಬ ಖಾಸಗಿ ಭೇಟಿ ಮಾಡಿದ್ದಾರೆ. ಖಾಸಗಿ ಭೇಟಿ ನೀಡಿರುವುದರಿಂದ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳಲು ಕುಮಾರಸ್ವಾಮಿ ನಿರಾಕರಿಸಿದ್ದಾರೆ.