ಜಗತ್ತನ್ನೇ ಗೆಲ್ಲುವಷ್ಟು ಶಕ್ತಿ, ಹೆದರದೇ ಮುನ್ನುಗ್ಗುವ ಛಲ, ಎಲ್ಲಾ ಸಾಧ್ಯವಿದೆ ಎನ್ನುವ ಮನೋಭಾವ, ವೈಯಕ್ತಿಕ ಸ್ವಾತಂತ್ರ್ಯದೆಡೆಗೆ ತುಡಿತ, ಇದನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಂಡು ತಳಮಳದಲ್ಲಿರುವ ಹದಿಹರೆಯದ ಮಕ್ಕಳು ದೇಶದ ಯುವಶಕ್ತಿ ಹಾಗೂ ಯುಕ್ತಿಯ ಭಂಡಾರವಾಗಿದ್ದಾರೆ. ಭಾರತದ ಜನಸಂಖೈಯಲ್ಲಿ 22% ಮಕ್ಕಳು ಯೌವ್ವನದ ಈ ಅವಸ್ಥೆಯಲ್ಲಿದ್ದಾರೆ. 12 ರಿಂದ 19 ವಯಸ್ಸಿನ ಯುವಕ, ಯುವತಿಯರಲ್ಲಾಗುವ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಸಮಾಜದೊಂದಿಗೆ ಹೊಂದಿಕೊಂಡು ನಡೆಯು ವಾಗ ಸಾಕಷ್ಟು ಬಿಕ್ಕಟ್ಟು ಉಂಟು ಮಾಡುತ್ತವೆ. ಸಮಾಜದ ಬಲಿಷ್ಠ ಹಾಗೂ ಮುಖ್ಯ ಭಾಗವಾಗಿರುವ ಹದಿಹರೆಯದ ಜನಸಂಖೈ, ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ತೆರಳುವ ಬದಲಾವಣೆಯ ಹಂತ ಸೂಕ್ಷ್ಮ ಹಾಗೂ ಅತೀ ಪ್ರಭಾವಕಾರಿ ವಯಸ್ಸು ಇದು ಪ್ರೌಢ ಬುದ್ಧಿವಂತಿಕೆ, ಆರ್ಥಿಕ ಸ್ವಾತಂತ್ರ್ಯ ಕಡೆಗೆ ಹೊರಡುವ ಹಂತ ಕೂಡ ಇದಾಗಿದೆ.
ಯೌವ್ವನಾವಸ್ಥೆ ಏಕೆ ಮುಖ್ಯವಾಗುತ್ತದೆ ? : ಈ ಸಮಯದಲ್ಲಿ ಮೆದುಳಿನ ಮುಂಭಾಗ ಇನ್ನೂ ಪರಿಪಕ್ವತೆ ಹೊಂದಲು ಪ್ರಾರಂಭಿಸಿರುತ್ತದೆ. ಜೀವನದ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಾಗೂ ಭಾವನೆಗಳನ್ನು ನಿಗ್ರಹಿಸುವ ಈ ಭಾಗ ಇನ್ನೂ ಬೆಳೆಯುತ್ತಿರುತ್ತದೆ. ನರಗಳ ಸುತ್ತಲಿನ ಪದರದ ನಿರ್ಮಾಣ ಹಾಗೂ ಅವುಗಳ ಶಾಖೆಗಳ ಬೆಳವಣಿಗೆ ಆಗುವ ಸಮಯವಿದು. ಇದು ಪೂರ್ತಿ ಯಾಗುವುದು 21-24ರ ವಯಸ್ಸಿನಲ್ಲಿ. ಆದ್ದರಿಂದ ಈ ಅವಧಿ ಅತೀ ಸೂಕ್ಷ್ಮ ಆಗಿರುತ್ತದೆ. ಗೌಪ್ಯತೆ ಕಾಪಾಡುಕೊಳ್ಳುವುದು, ತಮ್ಮ ತನವನ್ನು ಹುಡುಕುವ ತೊಳಲಾಟ, ಹೊಸ-ಹೊಸ ಪ್ರಯೋಗಗಳನ್ನು ಮಾಡುವ ಉತ್ಸಾಹ, ಹಠತ್ತಾನೆ ನಿರ್ಧಾರ ಮಾಡುವ ತುಡಿತ , ಅಪಾಯವನ್ನು ಎದುರಿಸುವ ಮೊಂಡು ಧೈರ್ಯ, ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಆತುರ ಈ ವಯಸ್ಸಿನಲ್ಲಿ ಇವೆಲ್ಲಾ ಹೆಚ್ಚಾಗಿ ಕಾಣುತ್ತವೆ. ಇಂಥಹ ಸಮಯದಲ್ಲಿ ಹಿರಿಯರಿಗೆ, ಪೋಷಕರಿಗೆ, ಹರೆಯದ ಮಕ್ಕಳು ಕೈತಪ್ಪುತ್ತಿದ್ದಾರೆ ಎನ್ನುವ ಭಯ ಕೂಡ ಕಾಡಲು ಪ್ರಾರಂಭವಾಗುತ್ತದೆ.
ಭಾರತದಲ್ಲಿ ಹದಿಹರೆಯದ ಮಕ್ಕಳ ಸ್ಥಿತಿ: ಹದಿಹರೆಯದ ಮಕ್ಕಳ ಮರಣ ಪ್ರಮಾಣ ನೋಡಿದರೆ ಭಾರತದಲ್ಲಿ 1% ಮಕ್ಕಳು 10-14 ವಯೋಮಿತಿಯಲ್ಲಿದ್ದರೆ 1.5% ಮಕ್ಕಳು 15-19 ವಯಸ್ಸಿನವಾರಾಗಿದ್ದಾರೆ. ಹದಿಹರೆಯದ ಮಕ್ಕಳ ಮರಣಕ್ಕೆ ಸಾಮಾನ್ಯ ಕಾರಣಗಳು- ರಸ್ತೆ ಅಪಘಾತ, ಆತ್ಮಹತೈ, ಕ್ಷಯರೋಗ, ಊIಗಿ ಸೋಂಕು, ಗರ್ಭಾವಸ್ಥೆಯ ತೊಂದರೆಗಳು. ದೇಶದ 15-20% ಯುವಜನಾಂಗ ರಕ್ತ ಹೀನತೆಗೆ ಒಳಗಾಗಿದ್ದಾರೆ, 25% ಮಾದಕ ವಸ್ತುಗಳ ವ್ಯಸನಿಗಳಾಗಿದ್ದಾರೆ. 14% ಮಾನಸಿಕ ಖಾಯಿಲೆಗಳಿಂದ ಬಳಲುತ್ತಿದ್ದಾರೆ, 31% ಲಿಂಗ ಪಕ್ಷಪಾತ ಹಾಗೂ ಲೈಗಿಂಕ ಹಿಂಸೆ ಅನುಭವಿಸುತ್ತಿದ್ದಾರೆ.
ಹದಿಹರೆಯದ ಮಕ್ಕಳನ್ನು ಕಾಡುವ ಸಾಮಾನ್ಯ ಸಮಸೈಗಳು: • ದೈಹಿಕ ಸಮಸ್ಯೆ : ಗಿಡ್ಡತನ, ಮೊಡವೆ, ವಿಳಂಬ ಅಥವಾ ಅತಿ ಬೇಗ ಹರೆಯಕ್ಕೆ ಕಾಲಿಡುವುದು, ರಕ್ತಹೀನತೆ, ಋತುಚಕ್ರದ ಸಮಸ್ಯೆಗಳು, ಬೊಜ್ಜುತನ • ಮಾನಸಿಕ ಸಮಸ್ಯೆ : ಖಿನ್ನತೆ, ಉದ್ವೇಗ, ನಡವಳಿಕೆಯ ತೊಂದರೆಗಳು, ಸಾಮಾಜಿಕ ಜಾಲತಾಣದ ಚಟ. • ಲೈಗಿಂಕ ಸಮಸ್ಯೆ : ಊIಗಿ ಸೋಂಕು ಸೇರಿದಂತೆ ಇನ್ನಿತರ ಕಾಯಿಲೆಗಳು ಹದಿಹರೆಯದ ಗರ್ಭಧಾರಣೆ. • ರಸ್ತೆ ಅಪಘಾತಗಳು ಕೂಡ ಹದಿಹರೆಯದ ಮಕ್ಕಳಲ್ಲಿ ಕಾಣಬಹುದಾದ ದೊಡ್ಡ ಸಮಸ್ಯೆ.
ತೊಂದರೆಗಳ ಸೂಚನೆ ನೀಡುವ ಲಕ್ಷಣಗಳು : • ಶಾಲಾ ಕಾಲೇಜುಗಳಲ್ಲಿ ಶೈಕ್ಷಣಿಕ ಕಾರ್ಯಕ್ಷÀಮತೆ ಕ್ಷೀಣಿಸುವುದು. • ಸಮಾಜದಿಂದ ವಿಮುಖವಾದ ವರ್ತನೆ. • ನಿದ್ರಾಹೀನತೆ, ಹಸಿವಿನ ಕೊರತೆ, ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಗಮನವಿಲ್ಲದಿರುವುದು. • ವಾರಗಳಿಗಿಂತ ಹೆಚ್ಚು ದಿನ ಬೇಸರದ ಮನಸ್ಥಿತಿ • ಮಾದಕ ದ್ರವ್ಯಗಳ ವ್ಯಸನಿಗಳಾಗಿರುವ ಮಿತ್ರರ ಜೊತೆ ಒಡನಾಟ. • ಸುಳ್ಳು ಹೇಳುವುದು, ದುಬಾರಿ ಉಡುಗೊರೆಗಳನ್ನು ಕೇಳುವುದು, ಕದಿಯುವುದು. • ಭಾವನೆಗಳ ಮೇಲೆ ನಿಯಂತ್ರಣವಿಲ್ಲದೆ ಕೆಲವರು ಹಿಂಸಾತ್ಮಕ ವರ್ತನೆ ತೋರುವುದು ಇವೆಲ್ಲಾ ಕಂಡುಬಂದರೆ ಪೋಷಕರು ನಿರ್ಲಕ್ಷಿಸದೆ ವೈದ್ಯರನ್ನು ಕಾಣುವುದು ಸೂಕ್ತ. ಮೊಡವೆ, ಋತುಚಕ್ರದ ಸಮಸ್ಯೆ, ದೇಹಸೌಂದರ್ಯದ ಬಗ್ಗೆ ಅತಿಯಾದ ಕಾಳಜಿ ಇರುವ ಮಕ್ಕಳನ್ನು ಸೂಕ್ತ ವೈದ್ಯರಿಗೆ ತೋರಿಸಿ ಮನೆ ಮಂದಿಯ ಜೊತೆಗೆ ನಡೆದುಕೊಳ್ಳುವುದರಲ್ಲಿ ಬದಲಾವಣೆ ಕಂಡರೆ ಮನೋವೈದ್ಯರನ್ನು ಕಂಡು ಸೂಕ್ತ ಸಲಹೆಗಳನ್ನು ಪಡೆಯಿರಿ.
ಏನು ಪರಿಹಾರ ? : ಕುಟುಂಬದ ವಾತಾವರಣ, ಆರ್ಥಿಕ ಸ್ಥಿತಿ, ಪೋಷಕರ ವಿವಾಹ ವಿಚ್ಛೇಧನೆ, ಕೌಟುಂಬಿಕ ಕಲಹಗಳು, ಪೋಷಕರ ಅತಿಯಾದ ಕಟ್ಟುನಿಟ್ಟಿನ ಅಥವಾ ನಿರ್ಲಕ್ಷ್ಯದ ಧೋರಣೆಗಳು ಸೂಕ್ಷ್ಮವಾದ ಮನಸ್ಸುಗಳುಳ್ಳ ಹದಿಹರೆಯದ ಮಕ್ಕಳಲ್ಲಿ ತೀವ್ರವಾಗಿ ಪ್ರಭಾವ ಬೀರುತ್ತವೆ. ಆದ್ದರಿಂದ ಇಂತಹ ಸಮಸ್ಯೆಗಳನ್ನು ಸೂಕ್ತ ಸಲಹೆಗಳಿಂದ ಸಾಕಷ್ಟು ನಿಯಂತ್ರಿಸಬಹುದು. ಹದಿಹರೆಯದ ಮಕ್ಕಳ ಗೌಪ್ಯತೆ ಕಾಪಾಡುವ ಹಾಗೂ ಅವರ ವಿಶ್ವಾಸವನ್ನು ನಿಭಾಯಿಸುವ ಹದಿಹರೆಯದ ಮಕ್ಕಳ ಆಸ್ಪತ್ರೆಗಳನ್ನು ತೆರೆಯುವ ಅಗತ್ಯವಿದೆ. ಅಲ್ಲಿ ಮಕ್ಕಳ ಹಾಗೂ ಕುಟುಂಬ ಸದಸ್ಯರ ಎಲ್ಲಾ ಮಾಹಿತಿಯನ್ನು ಪಡೆದು ಮಕ್ಕಳ ಮನಸ್ಸಿಗೆ ಅರ್ಥವಾಗುವಂತೆ ಪರಿಸ್ಥಿತಿಯನ್ನು ಮುಂದಿಡಬೇಕು. ಬದುಕಿನ ನಿರ್ಣಯಗಳನ್ನು ತೆಗೆದುಕೊಳ್ಳಲು ಮಾರ್ಗದರ್ಶನ ಮಾಡಬೇಕು. ಸಾಮಾಜಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸಬೇಕು. ಲೈಂಗಿಕ ಆರೋಗ್ಯದ ಬಗ್ಗೆ ಪೂರ್ತಿ ಮಾಹಿತಿಯನ್ನು ನೀಡಬೇಕು. ದೈಹಿಕ ವ್ಯಾಯಾಮ, ಯೋಗ, ಮಾನಸಿಕ ದೃಢತೆ, ಏಕಾಗ್ರತೆ ಮುಂತಾದವುಗಳನ್ನು ಸಂಪಾದಿಸುವುದನ್ನು ತಿಳಿಸಿಕೊಡಬೇಕೆಂದು ಸಾಮಾಜಿಕ ಜಾಲತಾಣಗಳ ದಾಸರಾಗದೆ ಅದನ್ನು ವೈಯಕ್ತಿಕ ಬೆಳವಣಿಗೆಗೆ ಉಪಯೋಗಿಸಲು ನಿರ್ದೇಶನ ನೀಡಬೇಕು. ಕೊರೊನಾ ಲಾಕ್ಡೌನ್ನಿಂದ ಹದಿಹರೆಯದ ಮಕ್ಕಳಲ್ಲಿ ಹುಟ್ಟಿರುವ ಭೀತಿ, ಉದ್ವೇಗ, ಖಿನ್ನತೆ ಅತಿಯಾದ ಬೊಜ್ಜು ಶೈಕ್ಷಣಿಕ ತೊಂದರೆಗಳು, ಭವಿಷ್ಯದ ಆತಂಕ, ಇದೆಲ್ಲವನ್ನು ನಿಭಾಯಿಸುವಲ್ಲಿ ಪೋಷಕರು, ಶಿಕ್ಷಕರು, ವೈದ್ಯರು ಗಮನಹರಿಸಬೇಕಾಗಿದೆ. ಎಲ್ಲರೂ ಸೇರಿ ಸರಿಯಾಗಿ ನಿಭಾಯಿಸೋಣ.
?ಡಾ. ಶಿಲ್ಪ ಸತೀಶ್,
ಮಡಿಕೇರಿ.