ಕುಶಾಲನಗರ, ಜೂ. 11: ಕೋವಿಡ್-19 ಮುನ್ನೆಚ್ಚರಿಕೆ ಹಿನ್ನೆಲೆ ಕುಶಾಲನಗರ ಸಮೀಪದ ಬೈಲುಕೊಪ್ಪೆ ಟಿಬೇಟಿಯನ್ ನಿರಾಶ್ರಿತ ಕೇಂದ್ರದ ಗೋಲ್ಡನ್ ಟೆಂಪಲ್ಗೆ ಪ್ರವಾಸಿಗರ ಭೇಟಿಗೆ ಆಗಸ್ಟ್ 26 ರ ತನಕ ನಿರ್ಭಂದ ಮುಂದುವರೆಸಲಾಗಿದೆ.
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ನ್ಯಾಮ್ಡ್ರೋಲಿಂಗ್ ಬೌದ್ಧ ಮಂದಿರದ ಪ್ರಧಾನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.