ಮಡಿಕೇರಿ, ಜೂ. 10: ಕೊಡಗು ಜಿಲ್ಲೆಯ ಪ್ರಮುಖ ಧಾರ್ಮಿಕ ಹಿನ್ನೆಲೆಯ ಕ್ಷೇತ್ರವಾಗಿದ್ದು, ಇಲ್ಲಿನ ಸಂಸ್ಕøತಿಯ ಪ್ರತೀಕವೂ ಆಗಿರುವ ಪಿಂಡ ಪ್ರಧಾನ ಕಾರ್ಯಕ್ಕೆ ಭಾಗಮಂಡಲದಲ್ಲಿ ಅವಕಾಶ ಒದಗಿಸುವಂತೆ ಅಮ್ಮತ್ತಿ ಕೊಡವ ಸಮಾಜ ಮನವಿ ಮಾಡಿದೆ. ಈ ಕುರಿತು ಹೇಳಿಕೆ ನೀಡಿರುವ ಸಮಾಜದ ಅಧ್ಯಕ್ಷ ಮೂಕೋಂಡ ಬೋಸ್ ದೇವಯ್ಯ ಅವರು ಪ್ರಸ್ತುತ ದೇವಾಲಯಗಳ ಲಾಕ್‍ಡೌನ್ ನಿರ್ಬಂಧ ಮುಕ್ತಗೊಳಿಸಿ ನಿಬಂಧನೆ ಗಳನ್ನು ಪಾಲಿಸುವ ಅವಕಾಶ ದೊಂದಿಗೆ ಮುಕ್ತಗೊಳಿಸ ಲಾಗಿದೆ. ಇದೇ ರೀತಿಯಲ್ಲಿ ಭಾಗಮಂಡಲ ಕ್ಷೇತ್ರದಲ್ಲೂ ಪಿಂಡ ಪ್ರಧಾನಕ್ಕೆ ಸಾಮಾಜಿಕ ಅಂತರಕಾಯ್ದು ಕೊಳ್ಳುವದು ಮತ್ತಿತರ ನಿಯಮದ ಅನ್ವಯ ಅವಕಾಶ ಕಲ್ಪಿಸಬೇಕು. ಜಿಲ್ಲಾಧಿಕಾರಿಗಳು ಕೊಡಗಿನ ಜನರ ಈ ಭಾವನೆಯನ್ನು ಅರಿತು ಇದಕ್ಕೆ ವ್ಯವಸ್ಥೆ ಮಾಡುವಂತೆ ಅವರು ಮನವಿ ಮಾಡಿದ್ದಾರೆ.