ವೀರಾಜಪೇಟೆ, ಜೂ. 10: ಹೊರ ರಾಜ್ಯದಿಂದ ವೀರಾಜಪೇಟೆ ತಾಲೂಕಿಗೆ ಬಂದ ಒಟ್ಟು 186 ಮಂದಿಗೆ ಆರೋಗ್ಯ ತಪಾಸಣೆ ಮಾಡಿಸಿ ಹೋಮ್ ಕ್ವಾರಂಟೈನ್ ಮಾಡಿಸಲಾಗಿದೆ ಎಂದು ತಾಲೂಕು ತಹಶೀಲ್ದಾರ್ ಎಲ್.ಎಂ. ನಂದೀಶ್ ತಿಳಿಸಿದ್ದಾರೆ. ಈ ಎಲ್ಲರೂ ತಮಿಳ್ನಾಡು, ಕೇರಳ ಹಾಗೂ ಗೋವಾ ರಾಜ್ಯದಿಂದ ವೀರಾಜಪೇಟೆಯ ವಿವಿಧೆಡೆಗಳಿಗೆ ಬಂದಿದ್ದರೆನ್ನಲಾಗಿದೆ.