ಮಡಿಕೇರಿ, ಜೂ. 10: ಶ್ರೀಮಂಗಲ ಪೈಸಾರಿ ಕಾಲೋನಿಯ ನಿವಾಸಿಗಳು ತಮ್ಮ ಮನೆಗಳ ಪಕ್ಕ ಕುಸಿದ ಬರೆಗೆ ತಡೆಗೋಡೆ ನಿರ್ಮಿಸಲು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಮನವಿ ಸಲ್ಲಿಸಿದರು.

ಕಳೆದ ವರ್ಷದ ಮಳೆಗೆ ಕಾಲೋನಿಯ ನಿವಾಸಿಗಳ ಮನೆಗಳ ಪಕ್ಕದ ಬರೆ ಕುಸಿದಿತ್ತು. ಇದಕ್ಕೆ ತಡೆಗೋಡೆ ನಿರ್ಮಿಸಲು ಕಳೆದ 2019 ನವೆಂಬರ್ 8 ರಂದು ಶ್ರೀಮಂಗಲ ಕಂದಾಯ ಕಚೇರಿಗೆ ಅರ್ಜಿ ಸಲ್ಲಿಸಿದ್ದು, ಇದುವರೆಗೂ ಯಾವುದೇ ಪ್ರಯೋಜನವಾಗಲಿಲ್ಲ. ಕೆಲ ನಿವಾಸಿಗಳು ಈಗ ಮಳೆಗಾಲದಲ್ಲಿ ತಮ್ಮ ಮನೆಯಲ್ಲಿ ವಾಸಿಸಲು ಹೆದರಿ, ಬೇರೆಯವರ ಮನೆಯಲ್ಲಿ ವಾಸಿಸುತ್ತಿದ್ದೇವೆ. ಆದ್ದರಿಂದ ಶೀಘ್ರದಲ್ಲೇ ತಡೆಗೋಡೆ ನಿರ್ಮಾಣದ ವ್ಯವಸ್ಥೆ ಕಲ್ಪಿಸುವ ಹಾಗೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.

ಈ ಸಂದರ್ಭ ಜಿಲ್ಲಾ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕಟ್ಟಿ ಮಂದಯ್ಯ, ಲೋಕನಾಥ, ಥೋಮಸ್, ಮಾರಾ ಹಾಗೂ ರಾಜು ಇದ್ದರು.