ನಾಪೋಕ್ಲು, ಜೂ. 10: ವೀರಾಜಪೇಟೆ ಸಮೀಪದ ನಾಂಗಾಲ ಗ್ರಾಮದ ಮಾಲಂಡ ವಿಶ್ವನಾಥ ಎಂಬವರ ಮನೆಯ ಬಳಿಯಲ್ಲಿ ಸುಮಾರು 13 ಅಡಿಗಳಷ್ಟು ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಬಿಟ್ಟಂಗಾಲದ ಪೊನ್ನೀರ ಸ್ನೇಕ್ ಗಗನ್ ಹಿಡಿಯುವಲ್ಲಿ ಸಫಲರಾದರು. ಪೊನ್ನೀರ ಗಗನ್ ಇದುವರೆಗೆ ಐದು ಸಾವಿರಕ್ಕೂ ಅಧಿಕ ಉರಗಗಳನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಹಾವುಗಳು ಸಾದು ಸ್ವಭಾವ ಹೊಂದಿದ್ದು, ಇದರಿಂದ ಯಾರಿಗೂ ಅಪಾಯ ಇಲ್ಲ ಎನ್ನುವ ಗಗನ್, ಅದನ್ನು ನಾವು ಕೆಣಕಿದರೆ ಪ್ರಾಣ ರಕ್ಷಣೆಗಾಗಿ ಮನುಷ್ಯರನ್ನು ಕಚ್ಚುತ್ತದೆ. ಏನೇ ವಿಷಪೂರಿತ ಹಾವುಗಳಿರಲಿ ಅವನ್ನು ಕೊಲ್ಲಬೇಡಿ ಎಂದು ಮನವಿ ಮಾಡಿದ್ದಾರೆ.