ಮಡಿಕೇರಿ, ಜೂ. 9: ಕೊರೊನಾ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಜಾರಿಯಲ್ಲಿದ್ದ ಕಾರಣ, ಶಾಲಾ ವಾಹನಗಳ ಅರ್ಹತಾ ಪತ್ರಗಳನ್ನು ನವೀಕರಣ ಮಾಡಲು ವಿಳಂಬವಾಗಿರುತ್ತದೆ. ಸಿಂಧುತ್ವ ಅವಧಿ ಮುಗಿದಿರುವ ವಾಹನಗಳ ಅರ್ಹತಾ ಪತ್ರಗಳನ್ನು ತಾ. 15 ರೊಳಗೆ ಕಡ್ಡಾಯವಾಗಿ ನವೀಕರಿಸಿಕೊಳ್ಳುವಂತೆ ತಿಳಿಸಿದೆ.

ತಾ. 18 ರಂದು ಪಿಯುಸಿ ಆಂಗ್ಲ ಭಾಷಾ ಪರೀಕ್ಷೆ ಮತ್ತು ತಾ. 25 ರಿಂದ ಜುಲೈ 4 ರವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಶಾಲಾ/ಶೈಕ್ಷಣಿಕ ವಿದ್ಯಾಸಂಸ್ಥೆಗಳ ವಾಹನಗಳನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಾರಿಗೆ ಸೌಲಭ್ಯಕ್ಕಾಗಿ ಬಳಸಬೇಕಾಗುತ್ತದೆ. ಈ ಸಮಯದಲ್ಲಿ ಶಾಲಾ ವಾಹನಗಳ ಎಲ್ಲಾ ದಾಖಲಾತಿಗಳು ಸಿಂಧುತ್ವದಲ್ಲಿ ಇರುವಂತೆ ನೋಡಿಕೊಳ್ಳಬೇಕು. ತಪ್ಪಿದಲ್ಲಿ ಮುಂದಿನ ಕಾನೂನು ರೀತ್ಯಾ ಕ್ರಮಗಳಿಗೆ ಶಾಲಾ ವಾಹನಗಳ ಮಾಲೀಕರೇ ಜವಾಬ್ದಾರರಾಗುತ್ತಾರೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.