ಮಡಿಕೇರಿ, ಜೂ. 9: ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿರುವಂತೆ ಮಸೀದಿಗಳಲ್ಲೂ ಪ್ರಾರ್ಥನೆ ಸಲ್ಲಿಸಲು ಅವಕಾಶ ದೊರೆತಿದೆ. ಆದರೆ ಮುಂದಿನ ಆದೇಶದವರೆಗೆ ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕೆಂದು ರಾಜ್ಯ ವಕ್ಫ್ ಮಂಡಳಿ ಮನವಿ ಮಾಡಿಕೊಂಡಿದ್ದು, ಕೊಡಗಿನ ಮುಸಲ್ಮಾನ ಬಾಂಧವರು ಸಹಕರಿಸಬೇಕೆಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೆ.ಎ.ಯಾಕುಬ್ ಮನವಿ ಮಾಡಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸರ್ಕಾರ ಲಾಕ್‍ಡೌನ್ ರಿಯಾಯಿತಿ ನೀಡಿದ್ದರೂ, ದೇಶ ವ್ಯಾಪಿ ಕೊರೊನಾ ವೈರಸ್‍ನ ಲಕ್ಷಣಗಳು ಗೋಚರಿಸುತ್ತಿ ರುವುದರಿಂದ ಆರೋಗ್ಯ ಸುರಕ್ಷತೆಯ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಅನಿವಾರ್ಯತೆ ಇದೆ ಎಂದು ತಿಳಿಸಿದ್ದಾರೆ.