ಗೋಣಿಕೊಪ್ಪಲು, ಜೂ. 9: ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ 67 ಲಕ್ಷದ ಕಾಮಗಾರಿಗಳ ಉದ್ಘಾಟನೆಯನ್ನು ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ನೆರವೇರಿಸಿದರು. ಅಮ್ಮತ್ತಿ-ಕಾರ್ಮಾಡುವಿನ ಚೆಟ್ಟಿಬಾಣೆ ಸಂಪರ್ಕ ರಸ್ತೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವುದನ್ನು ಗುರುತಿಸಿದ ಗ್ರಾಮಸ್ಥರು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ಅವರಿಗೆ ರಸ್ತೆ ಅಭಿವೃದ್ಧಿಪಡಿಸಲು ಮನವಿ ಮಾಡಿದ್ದರು. ಈ ಹಿನ್ನೆಲೆ ಶಾಸಕರ ಅನುದಾನದಿಂದ ರೂ. 5 ಲಕ್ಷ ವೆಚ್ಚದಲ್ಲಿ ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ.
ಸರಳ ಸಮಾರಂಭದಲ್ಲಿ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ನೂತನ ರಸ್ತೆಗೆ ಚಾಲನೆ ನೀಡಿದರು. ಅಲ್ಲದೆ ಪಂಚಾಯಿತಿ ವ್ಯಾಪ್ತಿಯ ಕಾವಾಡಿ, ಬಿಳುಗುಂದ ಲಿಂಕ್ ರಸ್ತೆ, ಕಾರ್ಮಾಡು, ಒಂಟಿಯಂಗಡಿ ಲಿಂಕ್ ರಸ್ತೆ, ಕುಟ್ಟಂಡ ಬಲ್ತೇರಿ ಐನ್ಮನೆ ರಸ್ತೆ, ಕಾವಾಡಿ ಅರಳಿಕಟ್ಟೆ ರಸ್ತೆ, ಬೋಜಿ ಬಡಾವಣೆ ರಸ್ತೆ, ನೆಲ್ಲಮಕ್ಕಡ ಐನ್ಮನೆ ರಸ್ತೆ, ಕಾವಾಡಿ ಮಾಣಿಕಂಡ ರಸ್ತೆ, ಒಂಟಿಯಂಗಡಿ ಸಂಪರ್ಕ ರಸ್ತೆ, ಮಾಚಿಮಂಡ ಐನ್ಮನೆ ಸಮುದಾಯ ಭವನ, ಅಮ್ಮತ್ತಿ ಹಿರಿಯರ ವಿಶ್ರಾಂತಿ ಕೇಂದ್ರದ ಕಟ್ಟಡ ಮೇಲ್ಭಾಗದಲ್ಲಿ ಗ್ರಂಥಾಲಯ ನಿರ್ಮಾಣ, ಕುಟ್ಟಂಡ ಐನ್ಮನೆ ರಸ್ತೆ, ಪೊನ್ನಜ್ಜೀರ ಕುಟುಂಬಸ್ಥರ ಐನ್ಮನೆ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದ್ದು ರೂ. 67 ಲಕ್ಷದ ಕಾಮಗಾರಿಗಳು ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕರ ವಿಶೇಷ ಪ್ಯಾಕೇಜ್ನಿಂದ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಸವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಮಾಚಿಮಂಡ ಮಧು ಮಾದಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇನಾ ಭೀಮಯ್ಯ, ಉಪಾಧ್ಯಕ್ಷೆ ಸುನಿತಾ, ಪಂಚಾಯಿತಿ ಸದಸ್ಯರಾದ ದೇವರಾಜು, ಮಂಜುಳ, ಜಯಮ್ಮ, ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕಾವಡಿಚಂಡ ಗಣಪತಿ, ಬಿಜೆಪಿ ಪಕ್ಷದ ಮುಖಂಡರಾದ ಮುಕ್ಕಾಟಿರ ಬೋಪಣ್ಣ, ಮುಕ್ಕಾಟಿರ ಸಂತೋಷ್, ಕಾಳಚಂಡ ಗಣಪತಿ, ಜಯ ಉತ್ತಪ್ಪ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಎಇಇ ಮಹಾದೇವ್, ಸಹಾಯಕ ಇಂಜಿನಿಯರ್ ಓಬಯ್ಯ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
- ಹೆಚ್.ಕೆ. ಜಗದೀಶ್