ಮಡಿಕೇರಿ, ಜೂ., 8: ಜಿಲ್ಲೆಯಲ್ಲಿ ಕೋವಿಡ್-19 ರ ಸಂಬಂಧ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇತರೆ ದೇಶ, ರಾಜ್ಯಗಳಿಂದ ಪಾಸ್‍ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರನ್ನು ಕಡ್ಡಾಯವಾಗಿ ನಿಯಮಾನುಸಾರ ಸಂಪರ್ಕ ತಡೆಯಲ್ಲಿಡಲಾಗುತ್ತಿದೆ. ಇತರ ದೇಶ,ರಾಜ್ಯ, ಜಿಲ್ಲೆಗಳಿಂದ ಕಳೆದ 14 ದಿನಗಳಲ್ಲಿ ಪಾಸ್‍ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರ ಪೈಕಿ ಸಂಪರ್ಕ ತಡೆಯಲ್ಲಿರುವ ಜನರ ವಿವರ ಕೆಳಕಂಡಂತಿದೆ.

ಇತರ ದೇಶದ ಜನರು- 41, ಇತರ ರಾಜ್ಯದ ಜನರು-210, ಒಟ್ಟು ಜನರು-251. ಇಲ್ಲಿಯವರೆಗೆ ಒಟ್ಟು 3503 ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ. ಪಾಸಿಟಿವ್ ಪ್ರಕರಣಗಳು- 3 (ಒಬ್ಬರು ಗುಣಮುಖರಾಗಿದ್ದಾರೆ), ನೆಗೆಟಿವ್ ವರದಿ ಬಂದ ಪ್ರಕರಣಗಳು-3473, ವರದಿ ನಿರೀಕ್ಷಿತ ಪ್ರಕರಣಗಳು-27. ಪ್ರಸ್ತುತ ಕೋವಿಡ್ ಆಸ್ಪತ್ರೆಯಲ್ಲಿ 68 ಜನರು ದಾಖಲಿರುತ್ತಾರೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆ ತಿಳಿಸಿದೆ.