ಕೂಡಿಗೆ, ಜೂ. 7: ಶ್ರೀ ದಂಡಿನಮ್ಮ ಮತ್ತು ಬಸವೇಶ್ವರ ದೇವಸ್ಥಾನ ಸೇವಾ ಸಮಿತಿ ಕೂಡಿಗೆ- ಕೊಪ್ಪಲು ಹೆಗ್ಡಳ್ಳಿ ಇವರ ವತಿಯಿಂದ ಗ್ರಾಮ ದೇವರುಗಳ ಪೂಜೋತ್ಸವ ಕಾರ್ಯಕ್ರಮ ನಡೆಯಲಿದೆ.

ದಿನಾಂಕ 8 ರಂದು ಸಂಜೆ 7 ಗಂಟೆಗೆ ಬಸವೇಶ್ವರ ದೇವರ ಪೂಜೆ. 12 ರಂದು ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಗಣಪತಿ ಹೋಮ ಮತ್ತು ದಂಡಿನಮ್ಮ ತಾಯಿಗೆ ಶಾಂತಿ ಹೋಮ ಮಧ್ಯಾಹ್ನ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ, 14 ರಂದು ಭಾನುವಾರ ಬೆಳಿಗ್ಗೆ 8 ಗಂಟೆಗೆ ಮುತ್ತತ್ತರಾಯ ದೇವರಿಗೆ ಪೂಜೆ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಕಾರ್ಯದರ್ಶಿ ರಂಗ(ಮಲ್ಲೇಶ್) ತಿಳಿಸಿದ್ದಾರೆ.