ಸಿದ್ದಾಪುರ, ಜೂ. 7 : ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಶ್ರೀಗಂಧವನ್ನು ಪತ್ತೆಹಚ್ಚಿ ಕಾರು ಸಮೇತ ಆರೋಪಿಗಳನ್ನು ಬಂಧಿಸುವಲ್ಲಿ ಸಿದ್ದಾಪುರ ಪೆÇಲೀಸರು ಯಶಸ್ವಿಯಾಗಿದ್ದಾರೆ.
ಅಮ್ಮತ್ತಿಯಿಂದ ಕುಶಾಲನಗರಕ್ಕೆ ಶ್ರೀಗಂಧವನ್ನು ಮಾರಾಟ ಮಾಡಲು ಮಾರುತಿ 800 ಕಾರಿನಲ್ಲಿ (ಕೆಎ 05 ಪಿ. 2579) ಸಿದ್ದಾಪುರ ಮಾರ್ಗವಾಗಿ ಕುಶಾಲನಗರಕ್ಕೆ ತೆರಳುತ್ತಿದ್ದ ಸಂದರ್ಭ ನೆಲ್ಯಹುದಿಕೇರಿ(ಮೊದಲ ಪುಟದಿಂದ) ಬಳಿ ಪೆÇಲೀಸರು ಖಚಿತ ಸುಳಿವಿನ ಮೇರೆಗೆ ದಾಳಿ ನಡೆಸಿದರು. ಈ ಸಂದರ್ಭ ಕಾರಿನ ಹಿಂಬದಿಯಲ್ಲಿ ಶ್ರೀಗಂಧವನ್ನು ಚೀಲದಲ್ಲಿ ತುಂಬಿ ಸಿರುವುದು ಕಂಡುಬಂದಿತ್ತು ಆರೋಪಿಗಳಾದ ಅಮ್ಮತ್ತಿ ನಿವಾಸಿಗಳಾದ ಮಂಜು (37) ಪ್ರದೀಶ್ (24) ಭೋಜಣ್ಣ (32) ಈ ಮೂವರನ್ನು ಠಾಣಾಧಿಕಾರಿ ಮೋಹನ್ ರಾಜ್ ಬಂಧಿಸಿದ್ದಾರೆ. ಅಲ್ಲದೆ ಪ್ರದೀಶ್ ಎಂಬಾತನಿಗೆ ಸೇರಿದ ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಕಾರ್ಯಾಚರಣೆಯಲ್ಲಿ ಸಿದ್ಧಾಪುರ ಠಾಣೆಯ ಸಿಬ್ಬಂದಿಗಳಾದ ವಸಂತ್ ಕುಮಾರ್, ಶಿವಕುಮಾರ್, ಸಂತೋಷ್ ಚವಣ್ ಮಲ್ಲಪ್ಪ ಪಾಲ್ಗೊಂಡಿದ್ದರು.