ನಾಪೆÇೀಕ್ಲು, ಜೂ. 5: ಸರಕಾರದ ಅದೇಶದಂತೆ ಕೊರೊನಾ ಲಾಕ್‍ಡೌನ್ ನಡುವೆ ನಾಪೆÇೀಕ್ಲುವಿನಲ್ಲಿ ಸರಳವಾಗಿ ಮದುವೆ ಸಮಾರಂಭವನ್ನು ಮನೆಯಲ್ಲಿಯೇ ನಡೆಸಲಾಯಿತು. ಸ್ಥಳೀಯ ನಿವಾಸಿ ಚಿಯಕಪೂವಂಡ ಪ್ರಭು ಅಚ್ಚಪ್ಪ ಮತ್ತು ನಾಪೆÇೀಕ್ಲು ಪಂಚಾಯಿತಿ ಮಾಜಿ ಅಧ್ಯಕ್ಷೆ ಮುತ್ತುರಾಣಿ ಅಚ್ಚಪ್ಪ ಅವರ ಪುತ್ರ ಪ್ರೀತಮ್ ನಾಚಪ್ಪ ಮತ್ತು ಹೊದವಾಡ ಗ್ರಾಮದ ಚೌರೀರ ರಾಜ ಚಿಣ್ಣಪ್ಪ ಮತ್ತು ರೆಮ್ಮಿ ದಂಪತಿಯ ಪುತ್ರಿ ರಕ್ಷಿತಾ ಮುತ್ತಮ್ಮ ಇವರ ವಿವಾಹವು ಮೇ ತಿಂಗಳ 6 ರಂದು ನಾಪೆÇೀಕ್ಲು ಕೊಡವ ಸಮಾಜದಲ್ಲಿ ನಡೆಯಬೇಕಿತ್ತು. ಲಾಕ್‍ಡೌನ್ ಕಾರಣದಿಂದ ಮದುವೆಯನ್ನು ಮುಂದೂಡಲಾಗಿ ಅವರು ತಾ. 4 ರಂದು ಇವರ ವಿವಾಹ ಸರಳ ರೀತಿಯಲ್ಲಿ ನಡೆಯಿತು. ವಿಶೇಷವೆಂದರೆ ಇದೇ ತಾ. 3 ರಂದು ತಮ್ಮ ನೂರನೇ (100) ಹುಟ್ಟು ಹಬ್ಬ ಆಚರಿಸಿಕೊಂಡ ಚೌರೀರಿ ಎ. ತಿಮ್ಮಯ್ಯ ಅವರು ಮಾರನೇ ದಿನವೇ ನವ ದಂಪತಿಗಳನ್ನು ಹೃದಯ ತುಂಬ ಆಶೀರ್ವದಿಸಿ ಶುಭ ಕೋರಿದರು.

-ದುಗ್ಗಳ ಸದಾನಂದ