ಪೊನ್ನಂಪೇಟೆ, ಜೂ. 5: ಕೊಡಗಿನಲ್ಲಿಯೇ ಪ್ರಥಮ ಬಾರಿಗೆ ಸೌರಶಕ್ತಿಯನ್ನು ಬಳಸಿಕೊಂಡು ಗ್ರಾಮ ಪಂಚಾಯಿತಿ ಕಟ್ಟಡವನ್ನು ಸಂಪೂರ್ಣ ಸೌರೀಕರಣ ಮಾಡುವ ಮೂಲಕ ಪೆÇನ್ನಂಪೇಟೆ ಗ್ರಾಮ ಪಂಚಾಯಿತಿ ವಿನೂತನ ಹೆಜ್ಜೆ ಇಟ್ಟಿದ್ದು ಜಿಲ್ಲೆಗೆ ಮಾದರಿಯಾಗಿದೆ. ಈ ಮೂಲಕ ವಿದ್ಯುತ್ ಅವಲಂಬಿಸದೆ ಕಛೇರಿಯ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಸಾಮಥ್ರ್ಯವನ್ನು ಪೆÇನ್ನಂಪೇಟೆ ಗ್ರಾಮ ಪಂಚಾಯಿತಿ ಪಡೆದು ಕೊಂಡಿದೆ. ಈ ವಿನೂತನ ಯೋಜನೆ ಇಂದಿನಿಂದ ಕಾರ್ಯರೂಪಕ್ಕೆ ಬಂದಿದ್ದು ಪೆÇನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸುಮಿತ್ರ ಚಾಲನೆ ನೀಡಿದರು.

ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ದೇಶನ ಹಾಗೂ ಆಶಯದ ಮೇರೆಗೆ ಪಂಚಾಯಿತಿ ನಿಧಿ ಹಾಗೂ 14 ನೇ ಹಣಕಾಸು ಆಯೋಗದ ಅನುದಾನದಲ್ಲಿ ಮೀಸಲಿರಿಸಿದ್ದ 3 ಲಕ್ಷ ರೂಪಾಯಿ ಯನ್ನು ಬಳಸಿಕೊಂಡು ಸೌರ ಯಂತ್ರಗಳನ್ನು ಅಳವಡಿಸಿದ್ದು ಸೂರ್ಯನ ಬೆಳಕಿನಿಂದ 4ಸಾವಿರ ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮಥ್ರ್ಯವನ್ನು ಹೊಂದಿದೆ.

ಗ್ರಾಮ ಪಂಚಾಯಿತಿ ಕಟ್ಟಡದ ಮೇಲೆ ಅಳವಡಿಸಿರುವ ಸೌರ ಯಂತ್ರಗಳಿಂದ ತಯಾರಾಗುವ ವಿದ್ಯುತ್ ಅನ್ನು ಶೇಖರಿಸಿಡಲು 4 ಸಾವಿರ ಕೆ ವಿ. ಸಾಮಥ್ರ್ಯದ 6 ಬ್ಯಾಟರಿಗಳು ಇದ್ದು, ಇಲ್ಲಿ ಸಂಗ್ರಹವಾಗುವ ಸೌರ ವಿದ್ಯುತ್‍ನಿಂದ 4 ಕಂಪ್ಯೂಟರ್‍ಗಳು , 14 ಸಿಸಿ ಕ್ಯಾಮರಾಗಳು, 2 ಪ್ರಿಂಟರ್, 15 ಎಲ್ ಇ ಡಿ ಬಲ್ಬ್ ಗಳು ಹಾಗೂ 8 ಫ್ಯಾನ್ ಗಳು ಕಾರ್ಯ ನಿರ್ವಹಿಸಲು ಸಾಧ್ಯವಿದೆ. ಮಳೆಗಾಲದಲ್ಲಿಯೂ ಕೂಡ ಕಾರ್ಯನಿರ್ವಹಿಸುವ ಸಾಮಥ್ರ್ಯವನ್ನು ಹೊಂದಿದ್ದು ಮಳೆಗಾಲದಲ್ಲಿ ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದ ಆಗುವ ತೊಂದರೆಯನ್ನು ತಪ್ಪಿಸಿದಂತಾಗಿದೆ.

ಮುಂದಿನ ದಿನಗಳಲ್ಲಿ ಈ ಸೌರ ಶಕ್ತಿಯನ್ನು ಬಳಸಿಕೊಂಡು ಪೆÇನ್ನಂಪೇಟೆ ವ್ಯಾಪ್ತಿಯ ಬೀದಿ ದೀಪ ಗಳನ್ನು ಬೆಳಗಿಸುವ ಯೋಜನೆಯನ್ನು ಗ್ರಾಮ ಪಂಚಾಯಿತಿ ವತಿಯಿಂದ ರೂಪಿಸಲಾಗುತ್ತಿದ್ದು, ಪೆÇನ್ನಂಪೇಟೆ ಗ್ರಾಮ ಪಂಚಾಯಿತಿಯ ಈ ವಿನೂತನ ನಡೆ ಜನ ಮೆಚ್ಚುಗೆಗೆ ಕಾರಣವಾಗಿದೆ. ಈ ವಿನೂತನ ಕಾರ್ಯಕ್ರಮದ ಉದ್ಘಾಟನೆಯ ಸಂದರ್ಭ ಪಿಡಿಓ ಪುಟ್ಟರಾಜು ಗ್ರಾ. ಪಂ. ಉಪಾಧ್ಯಕ್ಷೆ ಮಂಜುಳಾ ಸದಸ್ಯರಾದ ಎಂ.ಎಂ. ಕಾವೇರಮ್ಮ, ಕೆ. ಎ. ರಸಿಕ, ಎಂ. ಸಿ. ಯಶೋಧ, ಡಿ.ವಿ. ದಶಮಿ, ಕೆ. ಎನ್. ಸುಮತಿ, ಎಂ. ಸುಬೈದ, ಜಯಲಕ್ಷ್ಮಿ, ರೂಪ ಸಿ. ಉತ್ತಪ್ಪ, ಅಣ್ಣಿರ ಹರೀಶ್, ಅಡ್ಡಂಡ ಸುನಿಲ್, ಅಮ್ಮತ್ತಿರ ಸುರೇಶ್, ಆರ್. ಚಂದ್ರ ಸಿಂಗ್, ಪಿ.ಸಿ.ರಾಜು, ಆಲಿರ ಇ ಹಾರಿಸ್, ಆಲಿರ ರಶೀದ್, ಟಿ.ಸಿ. ಮಂಜು, ಮೂಕಳೇರ ಪಿ.ಲಕ್ಷ್ಮಣ್, ಎಂ.ಬಿ.ಹನೀಶ್ ಹಾಜರಿದ್ದರು.

-ಚನ್ನನಾಯಕ