ಮನೆಗಳ ಹಸ್ತಾಂತರ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಹಾಗೂ ಶಿಲಾನ್ಯಾಸ ಕಲ್ಲಿನಲ್ಲಿ ತಮ್ಮ ಹೆಸರು ನಮೂದಿಸಲಿಲ್ಲ ಎಂದು ಜಂಬೂರು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಕುಮುದಾ ಧರ್ಮಪ್ಪ ಹಾಗೂ ಸೋಮವಾರಪೇಟೆ ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಇವರುಗಳು ಅಸಮಾಧಾನ ವ್ಯಕ್ತಪಡಿಸಿ ಸಮಾರಂಭದ ವೇದಿಕೆ ಏರಲು ಹಿಂದೇಟು ಹಾಕಿದರು. ಈ ವೇಳೆ ಸಚಿವ ಸೋಮಣ್ಣ ಆಗಿರುವ ಪ್ರಮಾದಕ್ಕೆ ತಾನು ಕ್ಷಮೆ ಕೋರುತ್ತೇನೆ ದಯವಿಟ್ಟು ವೇದಿಕೆಗೆ ಬನ್ನಿ ಎಂದು ಮನವಿ ಮಾಡಿದ ಬಳಿಕ ಇಬ್ಬರೂ ವೇದಿಕೆ ಏರಿದರು.