ಗೋಣಿಕೊಪ್ಪಲು, ಜೂ. 4: ಗೋಣಿಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಜ್ಯೂಸ್ ಫ್ಯಾಕ್ಟರಿಯ ಸಮೀಪ ಲೈನ್ ಮನೆಯಲ್ಲಿದ್ದ ಪಲ್ಲವಿ (26) ಎಂಬ ವಿಶೇಷಚೇತನ ಮಹಿಳೆ ಕಾಣೆಯಾಗಿದ್ದಾರೆ. ಈಕೆಗೆ ಕಿವಿ ಕೇಳಸದಿದ್ದು, ಎರಡು ಕಿವಿಯ ಓಲೆಗಳು ಮಡಿಚಿಕೊಂಡಿರುವುದಾಗಿ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ. ಈಕೆಯ ಸುಳಿವು ಸಿಕ್ಕಲ್ಲಿ ಗೋಣಿಕೊಪ್ಪ ಪೊಲೀಸ್ ಠಾಣೆ 08274 247333 ಅಥವಾ ಯಾವುದೇ ಪೊಲೀಸ್ ಠಾಣೆಗೆ ತಿಳಿಸುವಂತೆ ಗೋಣಿಕೊಪ್ಪ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.