ಸೋಮವಾರಪೇಟೆ, ಜೂ. 4: ಮಡಿಕೇರಿ ಪ್ರಾದೇಶಿಕ ವಿಭಾಗದ ಸೋಮವಾರಪೇಟೆ ವಲಯದ ಕಾಜೂರು ಮತ್ತು ಕಣಿವೆ ನರ್ಸರಿಯಲ್ಲಿ ವಿವಿಧ ಜಾತಿಯ ಸಸಿಗಳು ರಿಯಾಯಿತಿ ದರದಲ್ಲಿ ವಿತರಿಸಲಾಗುವುದು ಎಂದು ವಲಯ ಅರಣ್ಯ ಅಧಿಕಾರಿ ಶಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೇರಳೆ, ಸಂಪಿಗೆ, ಹೊಂಗೆ, ಕಾಡು ಬಾದಾಮಿ, ಸಿಲ್ವರ್, ಕೂಳಿ, ಹಬ್ಬೇವು, ಹೊನ್ನೆ, ಮಹಾಘನ, ಬೀಟೆ, ನಂದಿ, ಶ್ರೀಗಂಧ, ಕರಡಿ, ಬಿದಿರು, ರಾಮಫಲ, ಹಲಸು ಇತ್ಯಾದಿ ಗಿಡಗಳಿದ್ದು, ಸಾರ್ವಜನಿಕರು ಪಡೆದುಕೊಳ್ಳಬಹುದು. ರೈತರು ಅರ್ಜಿ ಮತ್ತು ಆರ್‍ಟಿಸಿಯನ್ನು ಸಲ್ಲಿಸಿ ಪಡೆದುಕೊಳ್ಳಬೇಕು.