ವೀರಾಜಪೇಟೆ, ಜೂ, 4: ಧಾರ್ಮಿಕ ಮಂಡಳಿಯಿಂದ ಕೊರೊನಾ ಸೋಂಕು ತಡೆಗಟ್ಟಲು ಸೇವೆಗೈಯುತ್ತಿರುವ ಕೊರೋನಾ ಸೈನಿಕರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಆರ್ಜಿ ಪೆರುಂಬಾಡಿ ಗ್ರಾಮದ ಶ್ರೀ ಅಯ್ಯಪ್ಪ ಭಜನಾ ಮಂದಿರ ಮತ್ತು ಶ್ರೀ ಅಗ್ನಿ ಚಾಮುಂಡಿ ದೇವಾಲಯ ಬಾಳುಗೋಡು ಸಂಯುಕ್ತ ಆಶ್ರಯದಲ್ಲಿ ಆರ್ಜಿ ಪೆರುಂಬಾಡಿ ಶ್ರೀ ಅಯ್ಯಪ್ಪ ಭಜನಾ ಮಂದಿರದ ಸಭಾಂಗಣದಲ್ಲಿ ದೇವಾಲಯಗಳ ಆಡಳಿತ ಮಂಡಳಿ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಅಗ್ನಿ ಚಾಮುಂಡಿ ದೇವಾಲಯದ ಅಧ್ಯಕ್ಷ ಕೆ.ಬಿ. ಕಾವೇರಪ್ಪ ವಹಿಸಿದ್ದರು. ಸಮಾರಂಭದಲ್ಲಿ ಆರ್ಜಿ ಪಂಚಾಯಿತಿ ಮತ್ತು ಬೇಟೋಳಿ ಪಂಚಾಯಿತಿ ವ್ಯಾಪ್ತಿಯ ನಾಲ್ವರು ಆರೋಗ್ಯ ಶುಶ್ರ್ರೂಷಕಿಯರು, 7 ಆಶಾ ಕಾರ್ಯಕರ್ತರು ಮತ್ತು 11 ಮಂದಿ ಅಂಗನವಾಡಿ ಕಾರ್ಯಕರ್ತೆಯರಿಗೆ ದಿನಬಳಕೆಯ ವಸ್ತುಗಳ ಕಿಟ್ ನೀಡಲಾಯಿತು.
ವೇದಿಕೆಯಲ್ಲಿ ಶ್ರೀ ಅಯ್ಯಪ್ಪ ಭಜನಾ ಮಂದಿರ ಅಧÀ್ಯಕ್ಷ ಕೆ.ಕೆ. ಅನಿಲ್ ಕುಮಾರ್, ಉಪಾಧ್ಯಕ್ಷ ಗೋವರ್ಧನ ಮತ್ತು ಬಿ.ಪಿ ಜೀವನ್ ಉಪಸ್ಥಿತರಿದ್ದರು.
ಶ್ರೀ ಅಯ್ಯಪ್ಪ ಭಜನಾ ಮಂದಿರದ ಕಾರ್ಯದರ್ಶಿ ಸಿ.ಆರ್ ಬಾಬು ಶ್ರೀ ಅಗ್ನಿ ಚಾಮುಂಡಿ ದೇವಾಲಯದ ಉಪಾಧ್ಯಕ್ಷ ಬಿ.ಎಸ್. ರವೀಂದ್ರ, ಕಾರ್ಯದರ್ಶಿ ಟಿ.ಆರ್. ಗಣೇಶ್, ವೇಣು ಎಂ.ಕೆ., ಪಿ.ಆರ್. ಶಿವಪ್ಪ, ರಾಧಾಕೃಷ್ಣ ಮತ್ತು ದೇವಾಲಯಗಳ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.