ಕುಶಾಲನಗರ, ಜೂ. 1: ಕುಶಾಲನಗರದ ಸಾಯಿ ಬಡಾವಣೆ ಯಲ್ಲಿರುವ ಸಾಯಿ ಮಂದಿರ ಪ್ರದೇಶದ ಸರ್ವೆ ಕಾರ್ಯ ನಡೆಯಿತು.

ಬಡಾವಣೆಯಲ್ಲಿರುವ ಸಾರ್ವಜನಿಕ ಸೌಲಭ್ಯಗಳಿಗೆ ಮೀಸ ಲಾಗಿರುವ ಜಾಗದಲ್ಲಿ ಮಂದಿರ ನಿರ್ಮಾಣ ಮಾಡಲಾಗಿದೆ ಎಂಬ ದೂರಿನ ಮೇರೆಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಸರ್ವೆ ಕಾರ್ಯ ನಡೆದಿದೆ. ಕುಶಾಲನಗರ ಪ.ಪಂ. ಮುಖ್ಯಾಧಿಕಾರಿ ಸುಜಯ್ ಕುಮಾರ್ ಮತ್ತು ಇಂಜಿನಿಯರ್ ಶ್ರೀದೇವಿ ಸಮ್ಮುಖದಲ್ಲಿ ದೇವಾಲಯ ಪ್ರದೇಶದ ಮಾಹಿತಿಗಳನ್ನು ಕಲೆ ಹಾಕಲಾಯಿತು.

ಬಡಾವಣೆಯ ಸಮುದಾಯ ಚಟುವಟಿಕೆಗೆ ಮೀಸಲಿಟ್ಟ ಸ್ಥಳದಲ್ಲಿ ಸಾಯಿ ಮಂದಿರ ನಿರ್ಮಾಣ ಮಾಡಲಾಗಿದ್ದು, ಬಡಾವಣೆಯಲ್ಲಿ ಪರ್ಯಾಯವಾಗಿ ಸ್ಥಳ ಮೀಸಲಿರಿಸದೆ ಅಕ್ರಮ ಎಸಗಲಾಗಿದೆ ಎಂಬ ಆರೋಪದ ಹಿನ್ನೆಲೆ ಗೊಂದಲ ನಿವಾರಣೆಗೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಸಿಎ ಸೈಟ್‍ನಲ್ಲಿ ಮಂದಿರ ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ಬಡಾವಣೆಯಲ್ಲಿ ಉಳಿದ ಜಾಗದಲ್ಲಿ ಸರಕಾರಕ್ಕೆ ಪರ್ಯಾಯ ಜಾಗ ನೀಡುವಂತೆ ಪಂಚಾಯಿತಿಯಿಂದ ಈ ಹಿಂದೆ ಬಡಾವಣೆ ಮಾಲೀಕರಿಗೆ ನೋಟೀಸ್ ನೀಡಲಾಗಿತ್ತು. ಪರ್ಯಾಯ ಜಾಗವನ್ನು ಹಸ್ತಾಂತರಿ ಸುವಂತೆ ನಗರ ಪ್ರಾಧಿಕಾರಕ್ಕೂ ಪಂಚಾಯಿತಿಯಿಂದ ಪತ್ರ ಬರೆಯ ಲಾಗಿದೆ. ಈ ಸಂದರ್ಭ ಬಡಾವಣೆ ಮಾಲೀಕ ಧರೇಶ್ ಬಾಬು, ಪ.ಪಂ. ಸದಸ್ಯ ಅಮೃತ್‍ರಾಜ್, ಗ್ರಾಮ ಲೆಕ್ಕಿಗ ಗೌತಮ್, ಸರ್ವೆಯರ್ ದಿಲೀಪ್, ಗ್ರಾಮ ಸಹಾಯಕ ವೆಂಕಟೇಶ್ ಮತ್ತಿತರರು ಇದ್ದರು.