ವೀರಾಜಪೇಟೆ, ಜೂ.1 : ಕೊರೊನಾ ವೈರಸ್ ಲಾಕ್‍ಡೌನ್ ನಿರ್ಬಂಧದಿಂದ ಸುಮಾರು 68 ದಿನಗಳಿಂದ ಕೆಲಸವಿಲ್ಲದೆ, ವೇತನವಿಲ್ಲದೆ ಅತಂತ್ರರಾಗಿರುವ ಕೊಡಗು ಜಿಲ್ಲಾ ಖಾಸಗಿ ಬಸ್ಸು ಸಂಘಟನೆಯ ಕಾರ್ಮಿಕರಿಗೆ ಸಹಾಯ ಧನ ವಿತರಿಸುವಂತೆ ಸಂಘದ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಸಂಘದ ಅಧ್ಯಕ್ಷ ದಿನೇಶ್ ನಾಯರ್ ತಿಳಿಸಿದ್ದಾರೆ.

ಸಹಾಯ ಧನ ಪಡೆಯಲು ಖಾಸಗಿ ಬಸ್ಸು ಕಾರ್ಮಿಕರುಗಳು ನವೀಕರಿಸಿದ ಗುರುತಿನ ಚೀಟಿಯೊಂದಿಗೆ ಜೂನ್ 15ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಮಾಹಿತಿಗಾಗಿ ಸಂಘದ ಕಾರ್ಯದರ್ಶಿ ಟಿ.ಎನ್. ಮಂಜುನಾಥ್ ಮೊಬೈಲ್ ನಂ 9353898848 ಇವರನ್ನು ಸಂಪರ್ಕಿಸಬಹುದು ಎಂದು ದಿನೇಶ್ ತಿಳಿಸಿದ್ದಾರೆ.