ಮಡಿಕೇರಿ, ಮೇ 31: ಕರ್ನಾಟಕ ಧಾರ್ಮಿಕ ದತ್ತಿ ಹಾಗೂ ಧರ್ಮಾದಾಯ ಇಲಾಖೆಯ ಅಧೀನಕ್ಕೆ ಒಳಪಡುವ ದೇವಾಲಯಗಳನ್ನು, ಕೊರೊನಾ ಹಿನ್ನೆಲೆಯ ಲಾಕ್‍ಡೌನ್ ಬಳಿಕ, ಮುಂದಿನ ದಿನಗಳಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸುವ ವೇಳೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ, ಧಾರ್ಮಿಕ ದತ್ತಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.ರಾಜ್ಯದಲ್ಲಿ ಕೊರೊನಾ ವೈರಸ್ ಹರಡುವದನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಕ್ತಾದಿಗಳು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ಭಕ್ತಾದಿಗಳಿಗೆ ಸಾರ್ವಜನಿಕರಿಗೆ ಮುಂಬರುವ ದಿನಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಲಿರುವ ಸಾಧ್ಯತೆಗಳಿರುವದರಿಂದ, ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಪೂರ್ವ ತಯಾರಿ ಮಾಡಿಕೊಳ್ಳಲು ಸೂಚಿಸಿದೆ.ಈ ಪ್ರಕಾರ ಎಲ್ಲಾ ದೇವಾಲಯಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ಹಾಗೂ ಪ್ರತಿ ದಿನ ದೇವಾಲಯದ ಒಳ ಮತ್ತು ಹೊರ ಆವರಣಗಳನ್ನು ಕೋವಿಡ್ ವೈರಾಣು ತಡೆಗಟ್ಟಲು ಡಿಸ್‍ಇನ್ಟೆಕ್ಟೆಂಟ್‍ಗಳನ್ನು ಸಿಂಪಡಿಸುವುದು. ದೇವಾಲಯಗಳಿಗೆ ಹೆಚ್ಚುವರಿ ಸಿಬ್ಬಂದಿಗಳ (ಸೆಕ್ಯೂರಿಟಿ ಗಾರ್ಡ್) ಅವಶ್ಯಕತೆ ಇದ್ದಲ್ಲಿ, ದೇವಾಲಯದ ಆರ್ಥಿಕತೆಯನ್ನು ಗಮನದಲ್ಲಿಟ್ಟು ತಾತ್ಕಾಲಿಕವಾಗಿ ಎರಡು ತಿಂಗಳ ಅವಧಿಗೆ ನೇಮಿಸಿ ಕೊಳ್ಳುವುದು ಹಾಗೂ ಹೆಚ್ಚುವರಿ ಸೆಕ್ಯೂರಿಟಿ ಗಾರ್ಡ್‍ಗಳ ವ್ಯವಸ್ಥೆಗೆ ತಗಲುವ ವೆಚ್ಚವನ್ನು ಆಯಾಯ ದೇವಾಲಯದ ನಿಧಿಯಿಂದ ಭರಿಸುವುದು.

ದೇವಾಲಯದ ಅಧಿಕಾರಿ, ನೌಕರರು ಕಡ್ಡಾಯವಾಗಿ ಮಾಸ್ಕ್ ಗಳನ್ನು ಧರಿಸುವುದು ಹಾಗೂ ಅರ್ಚಕರು, ಆಗಮಿಕರು, ಪರಿಚಾರಕರು ಮುಂತಾದ ಒಳಾಂಗಣ ಸಿಬ್ಬಂದಿಗಳು ದೇವಾಲಯದ ಒಳಾಂಗಣವನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಮಾಸ್ಕ್‍ಗಳನ್ನು ಕಡ್ಡಾಯವಾಗಿ ಧರಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳು ದೇವಾಲ ಯಕ್ಕೆ ಪ್ರವೇಶಿಸುವ ದ್ವಾರಗಳಲ್ಲಿ ಕಡ್ಡಾಯವಾಗಿ ದೇಹದ ಉಷ್ಣತೆಯನ್ನು (Iಟಿಜಿಡಿಚಿಡಿeಜ ಖಿheಡಿmomeಣeಡಿ) ನಿಂದ ತಪಾಸಣೆ ಮಾಡುವುದು ಹಾಗೂ ಕೈಗಳಿಗೆ ಸ್ಯಾನಿಟೈಸರ್ ನೀಡುವುದು.

(ಇದನ್ನು ಖರೀದಿಸುವ ಸಲುವಾಗಿ ಇದಕ್ಕೆ ತಗಲುವ ವೆಚ್ಚವನ್ನು ಆಯಾಯ ದೇವಾಲಯದ ನಿಧಿಯಿಂದ ಭರಿಸುವುದು) ಭಕ್ತಾದಿಗಳಲ್ಲಿ ದೇಹದ ಉಷ್ಣತೆ ಹೆಚ್ಚಾಗಿರುವುದು ಕಂಡು ಬಂದಲ್ಲಿ ಅಂತಹ ವ್ಯಕ್ತಿ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡುವಂತಿಲ್ಲ.

ಭಕ್ತಾದಿಗಳು ಮಾಸ್ಕ್‍ಗಳನ್ನು ಅಥವಾ ಬಾಯಿ ಮತ್ತು ಮೂಗನ್ನು ಮುಚ್ಚುವಂತೆ ಕರವಸ್ತ್ರಗಳನ್ನು ಕಡ್ಡಾಯವಾಗಿ ಧರಿಸಿರುವವರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶ ಕಲ್ಪಿಸುವುದು. ಈ ಬಗ್ಗೆ ಸೂಚನಾ ಫಲಕಗಳ ಮೂಲಕ ಭಕ್ತರ ಗಮನಕ್ಕೆ ತರುವುದು. ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳು ಕಡ್ಡಾಯವಾಗಿ ಸಾಮಾಜಿಕ ಅಂತರ (ಇಂದು ಮೀಟರ್) ಕಾಪಾಡುವ ನಿಟ್ಟಿನಲ್ಲಿ ದೇವಾಲಯದಲ್ಲಿ ಅಗತ್ಯ ವ್ಯವಸ್ಥೆಯನ್ನು ಮಾಡಿಕೊಳ್ಳುವುದು, (ಉದಾ: ಭಕ್ತಾದಿಗಳ ಸರದಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮಾರ್ಕ್‍ಗಳನ್ನು ಗುರುತಿಸುವುದು, ಆಯಾಯ ದೇವಾಲಯಗಳಲ್ಲಿ ಅಗತ್ಯಕ್ಕೆ ತಕ್ಕಂತೆ ತಾತ್ಕಾಲಿಕ ಸರದಿ ಸಾಲುಗಳನ್ನು ನಿರ್ಮಿಸಿಕೊಳ್ಳುವದು ಕಡ್ಡಾಯವಾಗಿದೆ. ದೇವಾಲಯದ ಶೌಚಾಲಯಗಳನ್ನು ಆಗಿಂದಾಗ್ಗೆ ಸ್ವಚ್ಛಗೊಳಿಸುವುದು ಮತ್ತು ಕೋವಿಡ್ ವೈರಾಣು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ದೇವಾಲಯ ಉಸ್ತುವಾರಿ ಅಧಿಕಾರಿಗಳು ಅಗತ್ಯ ಗಮನ ಹರಿಸುವಂತೆ ಆದೇಶಿಸಲಾಗಿದೆ.