ಜೂನ್ 8 ರಿಂದ ಪ್ರಾರ್ಥನಾ ಮಂದಿರಗಳು, ಹೊಟೇಲ್‍ಗಳು ತೆರೆಯಲು ಅವಕಾಶ: ಶಿಕ್ಷಣ ಸಂಸ್ಥೆಗಳ ಬಗ್ಗೆ ಜುಲೈನಲ್ಲಿ ತೀರ್ಮಾನ ನವದೆಹಲಿ, ಮೇ.30 : ತಾ.31 (ಇಂದು) ಅಂತ್ಯಗೊಳ್ಳಲಿರುವ ಲಾಕ್‍ಡೌನ್ ಕುರಿತಂತೆ ಜೂ.1 ರಿಂದ ಹೊಸ ವ್ಯವಸ್ಥೆಗಳನ್ನು ಜಾರಿಗೊಳಿಸುವ ಬಗ್ಗೆ ಕೇಂದ್ರ ಗೃಹ ಕಾರ್ಯದರ್ಶಿ ಎಲ್ಲ ರಾಜ್ಯಗಳಿಗೆ ಸುತ್ತೋಲೆ ಕಳುಹಿಸಿದ್ದು, ಜೂನ್ 8ರ ತನಕ ಹಿಂದಿನ ವ್ಯವಸ್ಥೆಯೆ ಮುಂದುವರೆಯಲಿದೆ.ಹಂತ ಒಂದರಲ್ಲಿ ತಾ.8 ರಿಂದ ಪ್ರಾರ್ಥನಾ ಮಂದಿರಗಳು, ಹೊಟೇಲ್‍ಗಳು, ಶಾಪಿಂಗ್ ಮಾಲ್‍ಗಳು ಹಾಗೂ ಆತಿಥ್ಯ ಸೇವಾ ಕ್ಷೇತ್ರಗಳು ಕಾರ್ಯಾರಂಭ ಮಾಡಲಿವೆ. ಈ ಕುರಿತಂತೆ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಸಂಬಂಧಿತ ಕೇಂದ್ರ ಸಚಿವರು, ಇಲಾಖೆಗಳು ಹಾಗೂ ಆಯಾ ಕ್ಷೇತ್ರಗಳಲ್ಲಿ ಪಾಲ್ಗೊಂಡವರ ಜೊತೆ ಕೇಂದ್ರ ಆರೋಗ್ಯ ಸಚಿವಾಲಯ ಚರ್ಚೆ ನಡೆಸಿ ಸದ್ಯದಲ್ಲೆ ಆದೇಶ ಜಾರಿಗೊಳಿಸಲಿದೆ. ಹಂತ ಎರಡರಲ್ಲಿ ಶಾಲಾ ಕಾಲೇಜುಗಳು, ತರಬೇತಿ ಸಂಸ್ಥೆಗಳನ್ನು ತೆರೆಯುವ ಬಗ್ಗೆ ಜುಲೈ ತಿಂಗಳಲ್ಲಿ ತೀರ್ಮಾನ ಕೈಗೊಳ್ಳಲಿದ್ದು, ಅದಕ್ಕೂ ಮುನ್ನ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳು, ಶಿಕ್ಷಣ ಇಲಾಖೆ ಹಾಗೂ ಪೋಷಕರೊಂದಿಗೆ ಚರ್ಚಿಸಿ ಅಭಿಪ್ರಾಯಗಳನ್ನು ಸಂಗ್ರಹಿಸಲು ಕೇಂದ್ರ ತೀರ್ಮಾನಿಸಿದೆ. ಈ ಬಗ್ಗೆ ಕೇಂದ್ರ ಗೃಹಸಚಿವಾಲಯ ಮಾರ್ಗಸೂಚಿಯನ್ನು ತಯಾರಿಸಲಿದೆ. ಹಂತ ಮೂರರಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಅಂತರರಾಷ್ಟ್ರೀಯ ವಿಮಾನ ಚಾಲನೆಗೆ ಅವಕಾಶ ಕಲ್ಪಿಸಲಾಗುವುದು. ಅಲ್ಲದೆ ಮೆಟ್ರೋ ರೈಲ್, ಸಿನಿಮಾ ಹಾಲ್‍ಗಳು, ಜಿಮ್, ಈಜುಕೊಳ, ಮನೋರಂಜನಾ ಪಾರ್ಕ್‍ಗಳು, ಬಾರ್ ಮತ್ತು ಸಭಾಂಗಣಗಳು ತೆರೆಯುವ ಬಗ್ಗೆ ತೀರ್ಮಾನಿಸ ಲಾಗುವುದು. ಇದರೊಂದಿಗೆ ಸಾಮಾಜಿಕ, ರಾಜಕೀಯ, ಕ್ರೀಡೆ, ಮನೋರಂಜನೆ, ಶೈಕ್ಷಣಿಕÀ, ಸಾಂಸ್ಕøತಿಕ, ಧಾರ್ಮಿಕ ಕಾರ್ಯಕ್ರಮಗಳು ಮತ್ತು ಹೆಚ್ಚು ಜನ ಸೇರುವ ಸಮಾರಂಭಗಳ ಬಗ್ಗೆ ಈ ಹಂತದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ರಾತ್ರಿ ಕಫ್ರ್ಯೂರಾತ್ರಿ 9ರಿಂದ ಬೆಳಿಗ್ಗೆ 5ರ ತನಕ ಜನರ ಓಡಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಸಂಬಂಧಿತ ಇಲಾಖೆಗಳು ಸೆಕ್ಷನ್ 144 ಅಥವಾ ಇತರ ಕಾಯ್ದೆಗಳನ್ನು ಬಳಸಿ ಆದೇಶವನ್ನು ಜಾರಿಗೊಳಿಸಲು ಸೂಚಿಸಲಾಗಿದೆ.

ಎಲ್ಲಿ ಲಾಕ್‍ಡೌನ್ ?

ಜೂನ್.30 ರವರೆಗೆ ಕಂಟೈನ್‍ಮೆಂಟ್ ವಲಯಗಳಲ್ಲಿ ಲಾಕ್‍ಡೌನ್‍ಅನ್ನು ವಿಸ್ತರಿಸಲಾಗಿದೆ. ಇಂತಹ ಪ್ರದೇಶದಲ್ಲಿ ಆರೋಗ್ಯ ಮತ್ತು ಇತರ ಅಗತ್ಯ ವಸ್ತುಗಳ ಸಾಗಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಕಂಟೈನ್‍ಮೆಂಟ್‍ನ ಹೊರ ಪ್ರದೇಶಗಳಲ್ಲಿ ಜಿಲ್ಲಾಡಳಿತ ಬಫರ್ ಜೋನ್‍ಗಳನ್ನು ಗುರುತಿಸಿ ಅಂತಹ ಪ್ರದೇಶಗಳಲ್ಲಿ ಅಗತ್ಯವಿರುವ ನಿರ್ಬಂಧಗಳನ್ನು ಹೇರಲು

ಅವಕಾಶ ಕಲ್ಪಿಸಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿ ರಾಜ್ಯಗಳು ನಿರ್ಬಂಧದ ಇತರ ತೀರ್ಮಾನಗಳನ್ನು ಕೈಗೊಳ್ಳ ಬಹುದಾಗಿದೆ.

ಓಡಾಟಕ್ಕೆ ಅವಕಾಶ

ರಾಜ್ಯದೊಳಗೆ ಹಾಗೂ ಅಂತರ ರಾಜ್ಯಗಳಲ್ಲಿ ಜನತೆ ಹಾಗೂ ಸರಕು ಸಾಗಾಟಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಇದಕ್ಕೆ ಯಾವುದೇ ಅನುಮತಿಯ ಅಗತ್ಯ ಇರುವುದಿಲ್ಲ. ಹಾಗಿದ್ದು ಜನತೆಯ ಆರೋಗ್ಯದ ದೃಷ್ಟಿಯಿಂದ ರಾಜ್ಯಗಳು ಪರಿಸ್ಥಿತಿಯನ್ನು ಅವಲೋಕಿಸಿ ಜನತೆಯ ನಿರ್ಬಂಧಕ್ಕೆ ಕ್ರಮ ಕೈಗೊಳ್ಳಬಹುದಾಗಿದೆ. ಅಂತಹ ಸಂದರ್ಭಗಳಲ್ಲಿ ವ್ಯಾಪಕ ಪ್ರಚಾರ ಕೊಡಲು ಸೂಚಿಸಲಾಗಿದೆ. ರೈಲು ಹಾಗೂ ವಿಮಾನ ಮೂಲಕ ಸಂಚರಿಸುವವರಿಗೆ ಮಾರ್ಗಸೂಚಿ ಅನ್ವಯಿಸುತ್ತದೆ.

ಕಠಿಣ ಜಾರಿ

ಮೇಲ್ಕಂಡ ಆದೇಶಗಳನ್ನು ಯಾವುದೇ ರೀತಿ ಸಡಿಲಗೊಳಿಸದೆ, ಇದು 2005ರ

(ಮೊದಲ ಪುಟದಿಂದ) ವಿಪತ್ತು ನಿರ್ವಹಣಾ ಕಾಯ್ದೆ ಆಗಿರುವುದರಿಂದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಇದನ್ನು ಪಾಲಿಸುವಂತೆಯೂ ಎಲ್ಲ ಜಿಲ್ಲಾಧಿಕಾರಿಗಳು ಕಠಿಣವಾಗಿ ಈ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ.

ಕಾನೂನಿನ ಕ್ರಮ

ಅಧಿಕಾರಿಗಳ ಹಾಗೂ ಇಲಾಖೆಗಳ ಕರ್ತವ್ಯ ಸಂದರ್ಭ ತೊಂದರೆಪಡಿಸಿದಲ್ಲಿ, ದಂಡ ಹಾಗೂ ಜೈಲುವಾಸ ವಿಧಿಸಲಾಗುವುದು. ಈ ಸಂದರ್ಭವನ್ನು ಬಳಸಿ ಯಾವುದೇ ರೀತಿಯ ಪರಿಹಾರ ಬಯಸಿ ತಪ್ಪು ಮಾಹಿತಿ ನೀಡಿ ಲಾಭಮಾಡಿಕೊಂಡಲ್ಲಿ 5 ವರ್ಷದವರೆಗಿನ ಜೈಲು ಶಿಕ್ಷೆÉ ಹಾಗೂ ದಂಡವನ್ನು ವಿಧಿಸಲಾಗುವುದು.

ಯಾವುದೇ ತಪ್ಪು ಮಾಹಿತಿಯನ್ನು ಪ್ರಚಾರಪಡಿಸಿದಲ್ಲಿ 1 ವಷರ್À ಜೈಲು ಹಾಗೂ ದಂಡ ವಿಧಿಸಲಾಗುವುದು