ಕರಿಕೆ, ಮೇ 31: ಇಲ್ಲಿಗೆ ಸಮೀಪದ ತೋಟಂ ಎಂಬಲ್ಲಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಭಾಗಮಂಡಲ ಠಾಣೆಯಿಂದ ಕರಿಕೆ ಚೆಕ್‍ಪೆÇೀಸ್ಟ್‍ಗೆ ಕರ್ತವ್ಯಕ್ಕೆ ತೆರಳುತ್ತಿದ್ದ ಪೆÇಲೀಸ್ ಸಿಬ್ಬಂದಿ ಪ್ರಕಾಶ್ ಎಂಬವರು ಗಾಯಗೊಂಡಿದ್ದಾರೆ.
ಮಂಡ್ಯ ಮೂಲದ ಕಾರು (ಕೆ.ಎ.11 ಎನ್.3798) ಹಾಗೂ ಪೆÇಲೀಸ್ ಹೆಡ್‍ಕಾನ್ಸ್‍ಟೇಬಲ್ ಪ್ರಕಾಶ್ ಎಂಬವರ ಬೈಕ್ (ಕೆ.ಎ.12 5815) ನಡುವೆ ನಡೆದ ಅಪಘಾತದಲ್ಲಿ ಪ್ರಕಾಶ ಅವರ ಕಾಲಿನ ಮೂಳೆ ಮುರಿದಿದೆ. ಹೆಚ್ಚಿನ ಚಿಕಿತ್ಸೆ ಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಭಾಗಮಂಡಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.