ಮಡಿಕೇರಿ, ಮೇ 29: ನೆಲ್ಲಿಹುದಿಕೇರಿಯ ಎಂ.ಜಿ. ಕಾಲೋನಿ ನಿವಾಸಿ ಪಿ.ಕೆ. ಮೋಹನ್ ಕೆಲವು ಸಮಯದಿಂದ ಕಾಣೆಯಾಗಿದ್ದು, ಈ ಬಗ್ಗೆ ಅವರ ಸೋದರ ತಿಮ್ಮ ನೀಡಿರುವ ಪುಕಾರು ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಕಾಣೆಯಾದ ವ್ಯಕ್ತಿಯ ಸುಳಿವು ಲಭಿಸಿದರೆ ಸಿದ್ದಾಪುರ ಠಾಣೆಯ ದೂ. 08274-258333 ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.