ಮಡಿಕೇರಿ, ಮೇ 29: ವಸತಿ ಶಾಲೆ/ ವಸತಿ ನಿಲಯದ ಮಕ್ಕಳು ಅನಿವಾರ್ಯ ಕಾರಣದಿಂದ ಈಗಾಗಲೇ ಸೂಚಿಸಿರುವ ಕೇಂದ್ರದ ಬದಲಾವಣೆ ಬಯಸಿದಲ್ಲಿ ಮಂಡಳಿಯ ಶಾಲಾ ಲಾಗ್‍ಇನ್ ನಲ್ಲಿ ಈ ಸಂಬಂಧ ಮಾಹಿತಿ ನೀಡಲು ಅರ್ಜಿ ನಮೂನೆ ನೀಡಲಾಗಿದೆ.ಮುಖ್ಯ ಶಿಕ್ಷಕರು ಈ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಸಲ್ಲಿಸಲು ತಾ.31 ರವರೆಗೆ ಅವಕಾಶ ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್. ಮಚ್ಚಾಡೊ ತಿಳಿಸಿದ್ದಾರೆ.

ಮುಖ್ಯ ಶಿಕ್ಷಕರು ವಲಸೆ/ ವಸತಿ ಶಾಲೆ/ ವಸತಿ ನಿಲಯದ ಈ ಸೌಲಭ್ಯದ ಅಗತ್ಯವಿರುವ ವಲಸೆ ಮಕ್ಕಳಿಗೆ ದೂರವಾಣಿ ಕರೆ ಮಾಡಿ ವಾಸಸ್ಥಳದ ವಿವರ ಪಡೆದು ಮಾಹಿತಿಯನ್ನು ಮಂಡಳಿಯ ಜಾಲತಾಣದ ಶಾಲಾ ಲಾಗ್‍ಇನ್ ನಲ್ಲಿ ಚೇಂಜ್ ಆಫ್ ಸೆಂಟರ್ ಮೆನು ಬಳಸಿ ನಮೂದಿಸುವುದು. ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನೂ ಸಹ ಶಾಲಾ ಲಾಗ್‍ಇನ್ ನಲ್ಲಿ ನೀಡಲಾಗಿದೆ ಎಂದು ಡಿಡಿಪಿಐ ಅವರು ತಿಳಿಸಿದ್ದಾರೆ.