ಮಡಿಕೇರಿ, ಮೇ 29: ಮಡಿಕೇರಿ ಹಾಗೂ ವೀರಾಜಪೇಟೆಯ ಆರ್ಮಿ ಕ್ಯಾಂಟೀನ್‍ನಲ್ಲಿ ಜೂ. 1 ರಂದು ಲೆಕ್ಕ ತಪಾಸಣೆ ಇರುವುದರಿಂದ ಆದಿನ ಯಾವುದೇ ವ್ಯಾಪಾರ-ವಹಿವಾಟು ಇರುವುದಿಲ್ಲ. ಮಡಿಕೇರಿಯಲ್ಲಿ ಮದ್ಯ ಸಂಗ್ರಹ ಖಾಲಿಯಾಗಿರುವುದರಿಂದ ವೀರಾಜಪೇಟೆ ತಾಲೂಕಿನ ಕಾರ್ಡ್‍ದಾರರು ಅಲ್ಲಿ ಜೂ. 2 ರಿಂದ ಮದ್ಯ ಪಡೆದುಕೊಳ್ಳಬಹುದು. ಮಡಿಕೇರಿ ತಾಲೂಕಿನವರಿಗೆ ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಕ್ಯಾಂಟೀನ್ ವ್ಯವಸ್ಥಾಪಕರು ತಿಳಿಸಿದ್ದಾರೆ.